Breaking News

ದ. ಕ. ಜಿಲ್ಲೆ ಯೂತ್ ಕಾಂಗ್ರೆಸ್ ಆಂತರಿಕ ಚುನಾವಣೆ, ಪೊಲೀಸ್ ಬಿಗಿ ಭದ್ರತೆ ಮೂಲಕ ನಡೆದ ಮತದಾನ

ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್‌ನ ಅಂತರಿಕ ಚುನಾವಣೆ ಪೊಲೀಸ್ ಬಿಗಿಭದ್ರತೆಯಲ್ಲಿ ನಡೆಯಿತು.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಂಜಾನೆಯಿಂದಲೇ ಆರಂಭಗೊಂಡಿತ್ತು. ಈ ಬಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂರು ಮಂದಿ ಸ್ಪರ್ಧೆ ಮಾಡಿದ್ದು, ಮಿಥನ್ ರೈ ಹಾಗೂ ಲುಕಾನ್ಮ್ ನಡುವೆ ಭಾರೀ ಪೈಪೋಟಿ ನಡೆದಿದೆ. ಇದೇ ಮೊದಲ ಬಾರಿಗೆ ಅಂತರಿಕ ಚುನಾವಣೆಯಲ್ಲಿ ಗೊಂದಲ ಉದ್ಭವಿಸಿದ್ದು, ಮತದಾನ ಕೇಂದ್ರದಲ್ಲಿ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಈ ಹಿಂದೆ ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದುನನ್ನು ನೆನಪಿಸಿತು. ಸ್ಥಳದಲ್ಲಿ ಕೆ‌ಎಸ್‌ಆರ್‌ಪಿ ಪೊಲೀಸರು ಬಂದೋಬಸ್ತ್ ಮುನ್ನೆಚ್ಚರಿಕೆ ಕ್ರಮವಾಗಿ ಬಲವಾಗಿತ್ತು.

Related posts

Leave a Reply