Header Ads
Header Ads
Header Ads
Header Ads
Header Ads
Header Ads
Breaking News

ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಇಂದು ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಸಂಭ್ರಮ ಮನೆಮಾಡಿದೆ. ಆದ್ರೆ ನೆರೆ ಬಂದ ಹಿನ್ನೆಲೆ ಈ ಬಾರಿಯ ಸಂಭ್ರಮ ಸರಳವಾಗಿಯೇ ಇತ್ತು. ಹಾಗಾದ್ರೆ ಮುಸ್ಲಿಂ ಬಾಂಧವರು ಯಾವ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡಿದ್ರು ಅನ್ನೋದ್ರ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ. ಹೌದು..ಇಂದು ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಸಂಭ್ರಮ. ಮಂಗಳೂರಿನ ಬಾವುಟಗುಡ್ಡೆ ಮಸೀದಿ ಸೇರಿ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ ಹಬ್ಬದ ಆಚರಣೆ ನಡೆಯಿತು. ನೆರೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಇತಿಹಾಸ ಪ್ರಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯಿತು.ಮಾಜಿ ಸಚಿವ ಯು.ಟಿ ಖಾದರ್, ತ್ಯಾಗ, ಬಲಿದಾನದ ಸಂಕೇತವಾಗಿರುವ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಹಾಗೂ ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಬ್ಬದ ಶುಭಾಷಯ ಸಲ್ಲಿಸಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಇಲ್ಲಿನ ಗಂಟಾಲ್ ಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮಕ್ಕಳು ಮತ್ತು ಹಿರಿಯರು ಶುಭಾಷಯ ವಿನಿಮಯ ಮಾಡಿಕೊಂಡರು. ನೆರೆ ಸಂತ್ರಸ್ತರಿಗಾಗಿ ಇದೇ ಸಂದರ್ಭದಲ್ಲಿ ಧನ ಸಹಾಯವನ್ನು ಸಂಗ್ರಹಿಸಿದರು.ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ್ಹಾ ಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಮುಂಜಾನೆಯೇ ಮುಸಲ್ಮಾನ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಈ ಶುಭ ದಿನದಂದು ಹೊಸ ಬಟ್ಟೆ ಧರಿಸಿ ಬಂಧು ಮಿತ್ರರ ಮನೆಗಳಿಗೆ ತೆರಳಿ ವಿಶೇಷ ಭೋಜನಕೂಟದಲ್ಲಿ ಭಾಗವಹಿಸುವುವುದು ವಾಡಿಕೆ. ಈ ವಿಶೇಷ ಪರ್ವದಂದು ಪರಸ್ಪರ ಶುಭಾಶಯ ಹಂಚಿಕೊಳ್ಳವ ಮುಸ್ಲಿಂ ಭಾಂದವರು ತಪ್ಪನ್ನು ಮನ್ನಿಸುವಂತೆಯೂ ಕ್ಷಮೆ ಯಾಚಿಸುವುದು ವಿಶೇಷ. ಕುಂದಾಪುರ ತಾಲೂಕಿನ ಗಂಗೊಳ್ಳಿ ಪರಿಸರದಲ್ಲಿ ಹಬ್ಬದ ಹೊತ್ತಿಗೆ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಮುಸಲ್ಮಾನ ಬಾಂಧವರು ಮಾನವೀಯತೆ ಮೆರೆದಿದ್ದಾರೆ. ಮಾತ್ರವಲ್ಲ, ಹಬ್ಬದ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಯಿತು.

ಗಂಗೊಳ್ಳಿಯ ಮುಸ್ಲಿಂ ಭಾಂಧವರು ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ ವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ವಿಶೇಷ ನಮಾಜ್ ನೆರವೇರಿಸಿದರು. ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಮುಝಮ್ಮಿಲ್ ನದ್ವಿ, ಮೋಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಮತೀನ್ ಸಿದ್ದಿಕಿ ಹಾಗೂ ಸಲಫಿ ಮಸೀದಿಯಲ್ಲಿ ಮೌಲಾನಾ ತೌಫಿಕ್ ಉಮರಿ ಇವರು ಈದ್ ಖುದುಬ ಹಾಗೂ ನಮಾಜ್ ನೆರವೇರಿಸಿದರು. ಪರಸ್ಪರ ಆಲಿಂಗನಗೈದು ಈದ್ ಶುಭಾಶಯ ಹಂಚಿಕೊಂಡರು. ಅಗಲಿದವರ ಗೋರಿಗಳ ಬಳಿ ತೆರಳಿ ಪ್ರತ್ಯೇಕವಾಗಿ ವಿಶೇಷ ದುಆ ಮಾಡಲಾಯಿತು. ಎಸ್ಪಿ ನಿಶಾ ಜೇಮ್ಸ್ ಗಂಗೊಳ್ಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದಾರೆ. ಗುಂಪು ಹತ್ಯೆಯ ವಿರುದ್ಧ ಬ್ಯಾಡ್ಜ್ ಹಾಕಿ ನಮಾಜ್ ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು. ಗುಂಪು ಹತ್ಯೆಗಳ ವಿರುದ್ದ ಬ್ಯಾಡ್ಜ್ ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಗಂಗೊಳ್ಳಿ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಬಿಗಿ ಬಂದೋಬಸ್ತು ಮಾಡಲಾಗಿತ್ತು.

ಕಾರ್ಕಳ ಜಾಮಿಯಾ ಮಸೀದಿಯಲ್ಲಿ ತ್ಯಾಗ-ಬಲಿದಾನದ ಬಲಿದಾನಗಳ ಹಬ್ಬ ಅಝ್ಹಾವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಹಾಜಿ ಝಹೀರ್ ಖಾಸ್ಮಿ ಪ್ರವಚನ ನೀಡಿ ನಮಾಜನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಸ್ಫ್ಯಾಕ್ ಅಹಮದ್ ಸಮಸ್ತ ಬಾಂಧವರಿಗೆ ಶುಭಕೋರಿದರು. ಸಮಸ್ತ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ತಮ್ಮ ಪೂರ್ವಜರ ಸಮಾಧಿ ಸ್ಥಳಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.

Related posts

Leave a Reply

Your email address will not be published. Required fields are marked *