Header Ads
Header Ads
Breaking News

ದ.ಕ. ಜಿ.ಪಂ. ಸಭಾಂಗಣದಲ್ಲಿ ಇ-ಜನ್ಮ ತಂತ್ರಾಂಶದ ನಿರ್ವಹಣೆ ಕುರಿತು ಕಾರ್ಯಾಗಾರ

ಮಂಗಳೂರು: ಜನನ ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶದ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ಮಂಗಳೂರಿನ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ. ಉದಯ್ ಅವರು ಉಪನ್ಯಾಸ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಮಣಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜನನ ಮರಣವನ್ನು ಸಮರ್ಪಕವಾಗಿ ನೋಂದಾಣಿಯನ್ನು ಮಾಡಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಸರ್ಕಾರಕ್ಕೆ ಜನನ ಮರಣಗಳ ಅಂಕಿ ಅಂಶ ತಿಳಿಯಲು ಸಾಧ್ಯ ಎಂದು ಹೇಳಿದರು.

ಆನಂತರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ. ಉದಯ್ ಅವರು ಜನನ ಮರಣಗಳ ನೋಂದಾಣಿ ಬಗ್ಗೆ ಕಾರ್ಯಾಗಾರ ನೀಡಿದರು.

ಈ ಸಂದರ್ಭ ವಾರ್ತಾಧಿಕಾರಿ ರೋಹಿಣಿ ಉಪಸ್ಥಿತರಿದ್ದರು.

Related posts

Leave a Reply