Header Ads
Header Ads
Breaking News

ದ.ಕ. ಲೋಕಸಭಾ ಚುನಾವಣೆ ಸೀಟಿಗೆ ಅಲ್ಪಸಂಖ್ಯಾತರಿಂದ ಡಿಮ್ಯಾಂಡ್: ಮಾಜಿ ಸಚಿವ ರಮಾನಾಥ ರೈ ಪ್ರತಿಕ್ರಿಯೆ

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಸೀಟಿಗಾಗಿ ಅಲ್ಪಸಂಖ್ಯಾತರು ಡಿಮ್ಯಾಂಡ್ ಹಾಕಿದ್ದಾರೆ. ಲೋಕಸಭೆ ಸೀಟಿಗಾಗಿ ಕಾಂಗ್ರೆಸ್ ಮುಖಂಡರ ಪ್ರತ್ಯೇಕ ಸಭೆ ನಡೆದಿದೆ. ಈ ಕುರಿತು ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ರಮಾನಾಥ್ ರೈ ಅವರು ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷವಿದೆ.ಯಾರೂ ಕೂಡಾ ಟಿಕೆಟ್ ಕೇಳಬಹುದು. ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಈ ಹಿಂದೆ ಹೆಚ್ಚು ಸೀಟುಗಳನ್ನು ಕೊಟ್ಟಿದೆ.ಟಿಕೆಟ್ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ. ಯಾರಿಗೂ ಟಿಕೆಟ್ ನೀಡಿದ್ರೂ ಅದಕ್ಕೆ ನಾನು ಬದ್ಧನಾಗಿದ್ದೇನೆ ಅಂತಾ ಹೇಳಿದರು.

Related posts

Leave a Reply