Header Ads
Header Ads
Breaking News

ಧರ್ಮಗ್ರಂಥ ಎಂದರೆ ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ : ಕೆ.ವಿಕಾಸ್ ಹೆಗ್ಡೆ ಹೇಳಿಕೆ

ಕುಂದಾಪುರ: ದೇಶದಲ್ಲಿರುವ ಧರ್ಮಗಳಿಗೆ ಅನುಗುಣವಾಗಿ ಬೇರೆ ಬೇರೆ ಧರ್ಮ ಗ್ರಂಥಗಳಿದ್ದರೂ, ದೇಶದ 130 ಕೋಟಿ ಜನರಿಗೂ ಅರ್ಪಿತವಾಗಿರುವ ಧರ್ಮಗ್ರಂಥ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನ್ಯಾಯವಾದಿ ಕೆ.ವಿಕಾಸ್ ಹೆಗ್ಡೆ ನುಡಿದರು. ಅವರು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಆಶ್ರಯದಲ್ಲಿ ಪಾರ್ಲಿಮೆಂಟ್‌ಗೆ ಸಂವಿಧಾನ ಅರ್ಪಣೆ ಮಾಡಿದ ದಿನದ ಆಚರಣೆ ಅಂಗವಾಗಿ ನಡೆದ ಸಮಬಾಳು ಸಮಪಾಲಿಗೆ ನಮ್ಮ ಹೋರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಮಾತನಾಡಿ, ದೇಶದ ಅದೇಷ್ಟೋ ಜನ ಅಸ್ಪಶ್ರ್ಯತೆಯನ್ನು ಕಣ್ಣಾರೆ ಕಂಡು ಬೆಳೆದಿದ್ದಾರೆ. ಅದರ ನೋವು ಹಾಗೂ ಸಂಕಷ್ಟವನ್ನು ಅನುಭವಿಸಿದ್ದಾರೆ. ದೇಶದ ನೊಂದ ಈ ವರ್ಗದ ಜನರಿಗೆ ಶಕ್ತಿಯನ್ನು ತುಂಬಿದವರು ಡಾ.ಬಿ.ಆರ್. ಅಂಬೇಡ್ಕರ್ ಅವರು. ಸಂವಿಧಾನದ ಮೂಲಕ ಕೋಟ್ಯಾಂತರ ಜನರಿಗೆ ನ್ಯಾಯವನ್ನು ನೀಡಿದ ಅವರು ಸರ್ವಕಾಲಕ್ಕೂ ನಿತ್ಯ ಸ್ಮರಣೀಯರು ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಮಂಜುನಾಥ, ಕೌಸಿಕ್ ಪಾರ್ಕರ್, ಚಂದ್ರ ಅಲ್ತಾರ್, ವಿಜಯ್ ಕೆ.ಎಸ್ ಮೊದಲಾದವರು ಹಾಜರಿದ್ದರು.

 

Related posts

Leave a Reply

Your email address will not be published. Required fields are marked *