Header Ads
Header Ads
Header Ads
Header Ads
Header Ads
Header Ads
Breaking News

ಧರ್ಮರಕ್ಷಣೆಯ ಹೆಸರಲ್ಲಿ ಹಿಂದೂಗಳನ್ನೇ ಕೊಲೆಗೈಯ್ಯಲಾಗುತ್ತಿದೆ ಇದು ಅಪಾಯಕಾರಿ ಬೆಳವಣಿಗೆ : ಸಂತೋಷ್ ಕುಮಾರ್ ಬಜಾಲ್

ಕುಂದಾಪುರ: ಪ್ರತೀ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಠಿಸುತ್ತೇವೆಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉದ್ಯೋಗಗಳನ್ನು ಸೃಷ್ಠಿಸದೆ ಯುವಕರನ್ನು ತಪ್ಪು ದಾರಿಗೆಳೆಯುತ್ತಿದೆ. ಹಿಂದೂ ಧರ್ಮರಕ್ಷಣೆಯ ಹೆಸರಿನಲ್ಲಿ ಇಂದು ಹಿಂದೂಗಳನ್ನೇ ಕೊಲೆಗೈಯ್ಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಡಿವೈಎಫ್‌ಐನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಂತೋಷ್ ಕುಮಾರ್ ಬಜಾಲ್ ಕಳವಳ ವ್ಯಕ್ತಪಡಿಸಿದರು.ಅವರು, ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ನಿರುದ್ಯೋಗದ ವಿರುದ್ದ, ಸ್ಥಳೀಯ ಉದ್ಯೋಗದ ಸೃಷ್ಠಿಗಾಗಿ, ಸೌಹಾರ್ದ ಸುಂದರ ಸಮಾಜದ ನಿರ್ಮಾಣಕ್ಕಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ 15 ನೇ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ, ಯುವ ಸಾಹಿತಿ ಸಚಿನ್ ಅಂಕೋಲಾ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಮುಖಂಡರಾದ ನಾಗರತ್ನ ನಾಡಾ, ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *