Header Ads
Header Ads
Breaking News

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ : ರತ್ನಗಿರಿ ಬೆಟ್ಟದಲ್ಲಿ ತ್ಯಾಗಮೂರ್ತಿಗೆ ಮಹಾಮಜ್ಜನ

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಇಂದಿನಿಂದ ಪ್ರಾರಂಭಗೊಂಡಿದೆ. ಕ್ಷೇತ್ರದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ, ತ್ಯಾಗದ ಸಂಕೇತವಾದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕದ ಮಜ್ಜನ ಆರಂಭವಾಗಿದೆ. ಅಪಾರ ಜಿನಭಕ್ತರ, ಸಾಧುಸಂತರ, ಲಕ್ಷಾಂತರ ಭಕ್ತರ ಸಮಾಗಮ ಧರ್ಮಸ್ಥಳ ದಲ್ಲಿ ನಡೆಯುತ್ತಿದ್ದು, ಹಬ್ಬದ ವಾತಾವರಣವೇ ಧರ್ಮಸ್ಥಳದಲ್ಲಿ ಮನೆಮಾಡಿದೆ.ಹೌದು, ಕುಡುಮಕ್ಷೇತ್ರವೆಂದೇ ಪ್ರಚಲಿತದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಎಲ್ಲೆಡೆ ಹಬ್ಬಿದೆ. ವೈರಾಗ್ಯದ, ತ್ಯಾಗದ, ಸಹನೆಯ ಸಾಕಾರಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ಧರ್ಮಸ್ಥಳ ಕ್ಷೇತ್ರ ಸಜ್ಜಾಗಿದೆ. ಫೆಬ್ರವರಿ 19 ರವರೆಗೆ ಮಹಾಮಸ್ತಕಾಭಿಷೇಕ ಕ್ಷೇತ್ರದಲ್ಲಿ ನಡೆಯಲಿದ್ದು, ದೇಶ – ವಿದೇಶದಿಂದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಮಹಾಮಸ್ತಕಾಭಿಷೇಕದ ಮೊದಲ ದಿನದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಸಾಧು ಸಂತರ ಸಮಾವೇಶ ನಡೆದಿದ್ದು, ನಾಡಿನ ಶ್ರೇಷ್ಠ ಸಾಧು ಸಂತರು, ಜೈನ ಮುನಿಗಳು ಭಾಗವಹಿಸಿ ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ. ಹುಂಬುಜ ಕ್ಷೇತ್ರದ ದೇವೆಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, ಭರತ ಬಾಹುಬಲಿ ಕಾಲದಲ್ಲಿ ಅವರು ಕೈಗೊಂಡ ನಿರ್ಧಾರ ಇಂದಿನ ಕಾಲದಲ್ಲಿ ಪಾಲಿಸಿದರೆ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ತ್ಯಾಗದಿಂದಲೇ ಶಾಂತಿಯೆಂದು ಸಾರಿದಾತ ಬಾಹುಬಲಿ. ಆತ್ಮವೈಭವದ ಕುಂಬಮೇಳ ಧರ್ಮಸ್ಥಳದಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಇನ್ನು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಬಾಹುಬಲಿ ಜೀವನ ಅರಿಯುವ ಮೂಲಕ ಆತ್ಮವಿಶ್ವಾಸವನ್ನು ತುಂಬಿಕೊಳ್ಳಲು ಸಾಧ್ಯ. ತ್ಯಾಗದಿಂದ ಕೊನೆಗೆ ಸುಖ ಕಾಣಬಹುದು. ಇಹದ ಬದುಕಿನಲ್ಲಿ ಧರ್ಮದ ದಾರಿ ಪಾಲಿಸಬೇಕು. ಬದುಕಿನ ಶ್ರೇಷ್ಠತೆ ಆನಂದದ ಸೆಲೆಯಲ್ಲಿ ಅಡಗಿದೆ ಎಂದು ಹೇಳಿದರು.ಹುಂಬುಜ ಕ್ಷೇತ್ರದ ದೇವೆಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ.ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದರು. ಸಂತಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉದ್ಘಾಟಿಸಬೇಕಾಗಿದ್ದು ಕಾರಣಾಂತರಗಳಿಂದ ಗೈರು ಹಾಜರಾಗಿದ್ದರು. ದೊಡ್ಡ ಗೌಡರ ಅನುಪಸ್ಥಿತಿಯನ್ನು ನೆನಪಿಸಿಕೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ದೇವೇಗೌಡರು ಜೈನ ಧರ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ. ಶ್ರವಣಬೆಳಗೊಳದ ಎಲ್ಲಾ ಕೈಕಂಕರ್ಯಗಳನ್ನು ತಾವೇ ವಹಿಸಿದ್ದರು. ಅವರ ಅನುಪಸ್ಥಿತಿ ದೊಡ್ಡ ಕೊರತೆ ಎಂದು ನೆನಪಿಸಿಕೊಂಡಿದ್ದಾರೆ.ಡಾ.ಡಿವೀರೇಂದ್ರ ಹೆಗ್ಗಡೆ,ಧರ್ಮಸ್ಥಳ ಧರ್ಮಾಧಿಕಾರಿ ಸಾಧು ಸಂತರ ಸಮ್ಮೇಳನ ದಲ್ಲಿ ಆಶೀರ್ವಚನ ನೀಡಿದ ಸಾಧು ಸಂತರು ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಸಂತ ನುಡಿಗಳ ಮೂಲಕ ಆರಂಭಿಸುತ್ತಿರೋದು ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದ್ದಾರೆ. ಇಂದಿನಿಂದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನರಾಗಿರುವ ಬಾಹುಬಲಿ ಸ್ವಾಮಿಗೆ ದೈವಿಕ ಕಾರ್ಯಕ್ರಮಗಳೂ ಆರಂಭವಾಗಲಿದೆ. ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ,ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಕುಟುಂಬವರ್ಗ ವಿವಿಧ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ. ಫೆಬ್ರವರಿ 16,17,18ನೇ ತಾರೀಖು ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಮಹಾಮಜ್ಜನ ನಡೆಯಲಿದ್ದು,ಲಕ್ಷಾಂತರ ಭಕ್ತರ ಚಿತ್ತ ಧರ್ಮಸ್ಥಳ ದತ್ತ ನೆಟ್ಟಿದೆ

Related posts

Leave a Reply