Header Ads
Header Ads
Breaking News

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ : ಅಶಕ್ತರಿಗೆ ವಿವಿಧ ಸೌಲಭ್ಯಗಳ ವಿತರಣೆ

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ವೈಭವದಿಂದ ನಡೆಯುತ್ತಿದ್ದು, ಇದರ ಜೊತೆಗೆ ಸಾಮಾಜಿಕ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ. ಅದರಲ್ಲಿ ಜನಮಂಗಲ ಕಾರ್ಯಕ್ರಮದ ಭಾಗವಾಗಿ ಅಶಕ್ತರಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರು ಮತ್ತು ಮಾಜಿ ಸಚಿವ ರಮಾನಾಥ ರೈ ಅವರು ಆಶಕ್ತರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು, ಜಗತ್ತಿನಲ್ಲಿ ಹಿಂಸೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಭಗವಾನ್ ಬಾಹುಬಲಿಯವರ ಆದರ್ಶ ಗಳು ಹೆಚ್ಚು ಪ್ರಸ್ತುತವಾಗಿದೆ ಎಂದರು.ಆನಂತರ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಹಿಂಸೆ ಮಾತ್ರ ಜಗತ್ತನ್ನು ಉಳಿಸಬಲ್ಲುದಾಗಿದೆ. ಮಹಾ ಮಸ್ತಕಾಭಿಷೇಕದಂತಹ ಕಾರ್ಯಕ್ರಮಗಳು ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುವಂತಾಗಲಿ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯೆಪ್ರಸನ್ನತೀರ್ಥ ಸ್ವಾಮೀಜಿಯವರು ಮಾತನಾಡಿ, ಹಿಂಸೆಯಿಂದ ದೂರವಾಗಿ ನಡೆಯುವುದೇ ಧರ್ಮವಾಗಿದೆ, ಧರ್ಮ ಮತ್ತು ಅಹಿಂಸೆ ಒಟ್ಟಾಗಿ ಸಾಗಬೇಕಾಗಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರು ಅಸಹಾಯಕರಿಗೆ ನೆರವಾಗುವುದೇ ನಿಜವಾದ ಧರ್ಮವಾಗಿದ್ದು ಅಶಕ್ತರಿಗೆ ನೆರವಾಗುವ ಗುರಿಯೊಂದಿಗೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಸಾಮಾನ್ಯರಿಗೆ ನೆರವಾಗುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಮಾಜಿ ಸಚಿವ ಅಮರನಾಧ ಶೆಟ್ಟಿ, ಸಂಪತ್ ಸಮ್ರಾಜ್ಯ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ಧನ್, ಸುರೇಂದ್ರ ಕುಮಾರ್. ಡಾ. ಎಲ್ ಹೆಚ್ ಮಂಜುನಾಧ್, ಶ್ರೀನಿವಾಸ ರಾವ್ ಹಾಗೂ ಇತರರು ಉಪಸ್ಥಿತರಿದ್ದರುಈ ಸಂದರ್ಭದಲ್ಲಿ 540 ಮಂದಿಗೆ ವೀಲ್ ಚೆಯರ್, 400 ಮಂದಿಗೆ ವಾಕರ್‍ಗಳನ್ನು, 110 ಮಂದಿಗೆ ವಾಕಿಂಗ್ ಸ್ಟಿಕ್‌ಗಳನ್ನು ಹಾಗೂ ವಾಟರ್ ಬೆಡ್‌ಗಳು ಸೇರಿದಂತೆ 1.25 ಕೋಟಿಯ ಸಲಕರಣೆಗಳನ್ನು ವಿಕಲಚೇತನರಿಗೆ ವಿತರಿಸಲಾಯಿತು.

Related posts

Leave a Reply