Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಲಲಿತೋದ್ಯಾನೋತ್ಸವದ ಮೆರಗು

ಅಲ್ಲಿಗೆಜನಸಾಗರವೇ ಹರಿದುಬಂದಿತ್ತು. ಭಕ್ತರು ಭಕ್ತಿ- ಭಾವದಿಂದ ಕೈ ಮುಗಿದುದೇವರಲ್ಲಿ ಮೊರೆಹೋಗಿದ್ದರು. ವಿದ್ಯುತ್ ದೀಪ, ಹೂ ಅಲಂಕಾರವೂಜನರ ಮನ ಆಕರ್ಷಿಸುತ್ತಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ದಿವ್ಯ ಸಾನಿಧ್ಯದಲ್ಲಿಭಾನುವಾರನಡೆದ ಲಕ್ಷದೀಪೋತ್ಸವದ ಮೂರನೇ ದಿನದಲಲಿತೋದ್ಯಾನಉತ್ಸವದಲ್ಲಿಕಂಡುಬಂದ ದೃಶ್ಯವಿದು. ಐದು ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವದಲ್ಲಿ ಲಲಿತೋದ್ಯಾನಉತ್ಸವ ಮೂರನೇ ದಿನದಪೂಜಾ ವಿಧಿ-ವಿಧಾನವಾಗಿದ್ದು, ಭಕ್ತರಮನವನ್ನುಆಕರ್ಷಿಸಿತು.ದೇವರ ಮೂರ್ತಿಯನ್ನು ವಾದ್ಯ ಮೇಳದೊಂದಿಗೆ ಮಂಜುನಾಥನಗುಡಿಯ ಒಳಗೆ ಸುಮಾರು 16 ಸುತ್ತು ಪ್ರದಕ್ಷಿಣೆ ಹಾಕಿ, ಆ ಬಳಿಕಹೂವು, ದೀಪದಿಂದಅಲಂಕಾರಗೊಂಡ ಸ್ವರ್ಣ ಪಲ್ಲಕ್ಕಿಯಲ್ಲಿದೇವರನ್ನು ಕೂರಿಸಿಮುಂಭಾಗದಲ್ಲಿರುವಉದ್ಯಾನವನಕ್ಕೆ ಹೊತ್ತೊಯ್ಯಲಾಯಿತು.
ಮಧುಮಗಳಂತೆ ಕಂಗೊಳಿಸುವ ಲಕ್ಷ್ಮಿ ಹಾಗೂ ಲತಾ ಹೆಸರಿನಎರಡು ಆನೆಗಳು ಉತ್ಸವದ ಮೆರವಣಿಗೆಯಲ್ಲಿ ಮೊದಲು ಹೆಜ್ಜೆಹಾಕಿದವು.ಗಿರೀಶ ಹೆಸರಿನ ಬಸವ ಇದಕ್ಕೆ ಸಾಥ್ ನೀಡಿತು. ಪಲ್ಲಕ್ಕಿಯಎರಡೂ ಕಡೆಗಳಲ್ಲೂ ಪಂಜುಗಳನ್ನು ಹಿಡಿದು, ವಾಲಗ, ಓಲಗ, ಚಂಡೆ, ಶಂಖ, ಪತಾಕೆ, ವಿವಿಧ ವಾದ್ಯಗಳ ಜೊತೆಗೆ ಮೆರವಣಿಗೆ ಸಾಗಿತು. ಮಂಜುನಾಥನನ್ನು ಹಲವಾರು ದೀಪಗಳಿಂದ ಅಲಂಕೃತಗೊಂಡಉದ್ಯಾನವನದಲ್ಲಿಕೂರಿಸಿ, ಅರ್ಚಕರುವಿಶೇಷ ಪೂಜೆಗಳನ್ನು ಸಲ್ಲಿಸಿದರು.ದೇವರಿಗೆಅಷ್ಟಾವಧಾನ ಸೇವೆ, ನೈವೇದ್ಯದಕಾರ್ಯ ಪೂರ್ಣಗೊಂಡ ನಂತರಮಹಾಮಂಗಳಾರತಿ ಮಾಡಿ ಭಕ್ತರಿಗೆ ನೀಡಿದರು.ಲಲಿತೋದ್ಯಾನದಿಂದ ಸ್ವಾಮಿಯನ್ನುಮುಡಿಯ ಮೇಲೆ ಹೊತ್ತುದೇವಸ್ಥಾನದಎದುರುತಂದು ಬೆಳ್ಳಿ ರಥದಲ್ಲಿಕೂರಿಸಿ, ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ, ನಾನಾ ಕಡೆಯಿಂದ ಆಗಮಿಸಿದ ಭಕ್ತರು ಬೆಳ್ಳಿ ರಥವನ್ನು ಎಳೆಯುವುದರ ಮೂಲಕ ದೇವರಲ್ಲಿ ಮೊರೆಹೋದರು. ಕೊನೆಯಲ್ಲಿದೇವನಿಗೆಆರತಿ ಬೆಳಗಿ ಮೂರ್ತಿಯನ್ನು ಸನ್ನಿಧಿಯೊಳಗೆ ಕೊಂಡಯ್ಯಲಾಯಿತು. ಸುಮಾರು ಐದಾರು ವರ್ಷಗಳಿಂದ ಲಕ್ಷದೀಪೋತ್ಸವಕ್ಕಾಗಿ ಧರ್ಮಸ್ಥಳಕ್ಕೆ ಬಂದುದೇವರದರ್ಶನ ಪಡೆಯುತ್ತಿದ್ದೇವೆ. ಕುಟುಂಬದ ನೆಮ್ಮದಿ, ಮನಶಾಂತಿಗೋಸ್ಕರದೇವರಿಗೆ ಪೂಜೆಸಲ್ಲಿಸುತ್ತೇವೆಎಂದುಮೂಡಿಗೆರೆ ಮೂಲದವರಾದ ಮಹಾಲಕ್ಷ್ಮಿಅಭಿಪ್ರಾಯಪಟ್ಟರು.

 

Related posts

Leave a Reply

Your email address will not be published. Required fields are marked *