Header Ads
Header Ads
Header Ads
Breaking News

ಧರ್ಮಸ್ಥಳದ ಲಕ್ಷದೀಪೋತ್ಸವ : ಗ್ರಾಹಕರ ಕೇಂದ್ರಬಿಂದು ಆಭರಣ ಪೆಟ್ಟಿಗೆ

ಮರದ ಚಿನ್ನದ ಪೆಟ್ಟಿಗೆಯಿಂದ ಹಿಡಿದು ಮರದಿಂದ ತಯಾರಿಸಿದ ಪುಟ್ಟ ಪುಟ್ಟ ಸೈಕಲ್‌ನಂತಹ ಕಣ್ಮನ ಸೆಳೆಯುವ ಮರದ ವಸ್ತುಗಳು ದೃಶ್ಯವು ಧರ್ಮಸ್ಥಳ ಲಕ್ಷದೀಪೋತ್ಸವ ಬೀದಿಯಲ್ಲಿ ಕಾಣ ಸಿಗುತ್ತಿವೆ.
ಇದರ ವ್ಯಾಪಾರಿ ಮೊಹಮ್ಮದ್ ಜಮೀರ್ ಮೈಸೂರಿನಿಂದ ಎರಡನೇ ಬಾರಿ ಲಕ್ಷದೀಪೋತ್ಸವ್ಕೆ ಆಗಮಸುತ್ತಿದ್ದು ಮನೆಯಲ್ಲೇ ತಯಾರಿಸುವ ಮರದ ಕೆತ್ತನೆಯ ಆಭರಣ ಪೆಟ್ಟಿಗೆ, ಸುಂದರ ಆಕೃತಿಯ ಗಡಿಯಾರ, ಮರದ ಸೈಕಲ್,ಮರದ ಸೌಟುಹಾಗೂ ಇನ್ನಿತರ ಮರದ ಕೆತ್ತನೆಯ ವಸ್ತುಗಳು ಇಲ್ಲಿವೆ.ಅರಮನೆ ನಗರದ ಸುತ್ತಲಿನ ಮರಗಳಿಗೆ ಜೀವ ನೀಡಿ ಅದಕ್ಕೊಂದು ಆಕಾರ ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ ಮೊಹಮ್ಮದ್ ಜಮೀರ್. ಮನೆಯಲ್ಲೆ ಕೈಕೆತ್ತನೆ ಹಾಗೂ ಸಣ್ಣ ಮಟ್ಟಿನ ಯಂತ್ರಗಳ ಸಹಾಯದಿಂದ ಈ ವಸ್ತುಗಳನ್ನು ತಯಾರಿಸುವ ಇವರಿಗೆ ಸುಮಾರು ೩೦ ವರ್ಷಗಳ ಅನುಭವ. ಈ ವಸ್ತುಗಳನ್ನು ಸಾಗುವಾನಿ, ಬೀಟಿ ಫ್ಲೈ ವುಡ್,ಕಾರ್ಡ್ ಬೋರ್ಡ್‌ನ ಸಹಾಯದಿಂದ ತಯಾರಿಸುತ್ತಾರೆ.
ಈ ವೃತ್ತಿಯು ತಮ್ಮ ಕುಲಕಸುಬು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಂದೆ ಅಮೀರ್ ಪಾಷ ಆರಂಭಿಸಿದ ಈ ವೃತ್ತಿಯನ್ನು ಅವರು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ನಿರೀಕ್ಷೆಗೆ ತಕ್ಕಂತೆ ಉತ್ತಮ ರೀತಿಯಲ್ಲಿ ವ್ಯಾಪಾರವು ನಡೆಯುತ್ತಿದೆ. ಹಾಗೇ ಮರದ ಆಭರಣ ಪೆಟ್ಟಿಗೆ,ವುಡನ್‌ಟ್ರೇ, ಮರದ ಪುಟ್ಟ ಸೈಕಲ್ ನೋಡುಗರನ್ನು ಉತ್ತಮ ರೀತಿಯಲ್ಲಿ ಸೆಳೆಯುತ್ತಿದ್ದು ಮಾರಾಟವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯನ್ನು ದೀಪೋತ್ಸವದ ಆರಂಭದಿಂದ ಕಾಣುತ್ತಿದ್ದೇವೆ ಎನ್ನುತ್ತಾರೆ ಜಮೀರ್. ಮರದ ವಿಶೇಷ ವಸ್ತುಗಳ ಜೊತೆಗೆ ಇವರು ಚೀನಾ ಮಾರುಕಟ್ಟೆಯ ವಸ್ತುಗಳನ್ನು ಮಾರುತ್ತಿದ್ದಾರೆ. ಅದರ ಮಾರಾಟವನ್ನು ಗಮನಿಸಿದರೆ ಮರದ ವಸ್ತುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಿದ್ದಾರೆ.ಇವರ ಅಂಗಡಿಯು ಮೈಸೂರು ಅರಮನೆ ಮೈದಾನದಲ್ಲಿ ಪ್ರತಿದಿನ ತೆರೆದಿರುತ್ತದೆ. ವಾರದ ಭಾನುವಾರ ಇವರಿಗೆ ಒಂಥರಾ ಹಬ್ಬದ ವಾತವರಣ, ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರ ಅಗಮನದಿಂದ ಉತ್ತಮ ರೀತಿಯಲ್ಲಿ ನಡೆಯುತ್ತದೆ.ತಮ್ಮ ಕುಟುಂಬವು ಇದರ ಅದಾಯವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ ಎನ್ನುತ್ತಾರೆ ಅವರು.
ವರದಿ ಮತ್ತು ಚಿತ್ರ : ಸ್ವಾತಿ.ಎಂ.ಜಿ

Related posts

Leave a Reply

Your email address will not be published. Required fields are marked *