Header Ads
Header Ads
Breaking News

ಧರ್ಮಸ್ಥಳದ ಲಕ್ಷದೀಪೋತ್ಸವ : ಉತ್ಸವದಲ್ಲಿ ಬಳೆಗಳು ಆಡುತಿವೆ…

ಧರ್ಮಸ್ಥಳದ ಲಕ್ಷದೀಪೋತ್ಸವಎಂದತಕ್ಷಣಅದರ ವೈಶಿಷ್ಟ್ಯ ನೆನಪಾಗುತ್ತದೆ. ಧಾರ್ಮಿಕ ಮಹತ್ವದಜೊತೆಗೆಅದಕ್ಕೆ ಸಾಮಾಜಿಕ ಮನ್ನಣೆಯೂಇದೆ. ಅದುಐದು ದಿನದ ಬೃಹತ್ ಹಬ್ಬ. ಉತ್ಸವದ ಅಷ್ಟೂ ದಿನಗಳ ಕಾಲ ಶ್ರೀ ಕ್ಷೇತ್ರದ ಸುತ್ತ ಜನಜಂಗುಳಿ,ಸಂಭ್ರಮ, ಸಡಗರವಿರುತ್ತದೆ.ಒಬ್ಬೊಬ್ಬರಿಗೆಒಂದೊಂದುಅನುಭವದಕ್ಕುವುದೇಅಲ್ಲಿಯ ವಿಶೇಷ.ಉತ್ಸವಎಂದರೆ ಕೇಳಬೇಕೇ. ಅನೇಕ ಅಂಗಡಿಗಳು ತಿಂಡಿತಿನಸುಗಳಿಂದ ಹಿಡಿದುಎಲ್ಲವನ್ನೂಮಾರಾಟಕ್ಕಿಟ್ಟಿರುತ್ತಾರೆ. ಹೆಣ್ಣುಮಕ್ಕಳಿಗೆ ಮೊದಲುಕಣ್ಣಿಗೆತಾಕುವುದೇ ಆಭರಣಗಳ ಅಂಗಡಿಗಳು. ದೇವಾಲಯದರಸ್ತೆಯಲ್ಲಿ ನಡೆದ ನನಗೆ ಎಲ್ಲಾ ಹೆಣ್ಮಕ್ಕಳಂತೆ ಮೊದಲುಕಣ್ಣಿಗೆ ಬಿದ್ದದ್ದುಒಂದುಆಭರಣದ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟಂತಹ ಬಂಗಾರ ಮತ್ತು ಬೆಳ್ಳಿ ಬಣ್ಣದ ಬಳೆಗಳು. ಹೆಣ್ಣುಮಕ್ಕಳಿಗಂತೂ ಬಳೆಗಳು, ಓಲೆಗಳು ಮುಂತಾದ ಶೃಂಗಾರೋಪಕರಣಗಳು ಕಂಡರೆಇನ್ನೇನು ಬೇಕು, ಅಲ್ಲಿಂದಏನಾದರೂಖರೀದಿಸದೆ ಹೊರಬರುವ ಪ್ರಶ್ನೆಯೇಇಲ್ಲ.

ಬಳೆಗಳಿಗೆ ಹೆಣ್ಮಕ್ಕಳ ಅಂದವನ್ನು ಹೆಚ್ಚಿಸುವ ಸಾಮಥ್ರ್ಯಇದೆಯೆಂದರೆಅತಿಶೋಕ್ತಿಯಾಗದುಯಾಕೆಂದರೆ ಕುಂಕುಮ, ಬಳೆ, ಓಲೆ ಮುಂತಾದವುಗಳಿಗೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ,ಅವರ ಮೇಲಿನ ಗೌರವವನ್ನೂಕೂಡ ಹೆಚ್ಚಿಸುತ್ತದೆ.ಬಳೆಗಳಲ್ಲಿ ವಿವಿಧರೀತಿಯ ಬಣ್ಣಗಳಿವೆ. ಅದರಲ್ಲೂಕಪ್ಪು ಬಳೆ ಅತೀ ಶ್ರೇಷ್ಠವಾದದ್ದು.ವೈಜ್ಞಾನಿಕವಾಗಿ ಹೇಳುವುದಾದರೆಕಪ್ಪು ಬಳೆ ಧರಿಸುವುದರಿಂದದೇಹದಅರೊಗ್ಯಕ್ಕೂ ಒಳ್ಳೆಯದು.ಇನ್ನು ಬಳೆಗಳು ಮಹಿಳೆಯರ ಸುಂದರ ಕೈಗಳನ್ನು ಅಲಂಕರಿಸುವ ಸಾಂಪ್ರದಾಯಿಕಆಭರಣ, ಇದುಟ್ರೆಡಿಷನಲ್ ಡ್ರೆಸ್‍ಗಳಿಗೂ ಸೈ. ಮೋಡರ್ನ್ ಡ್ರೆಸ್‍ಗಳಿಗೂ ಸೈ. ಸೀರೆಗೆ ಮೆಟಲ್ ಬಳೆಗಳಾದರೆ ಜೀನ್ಸ್‍ಗೆ ಪ್ಲಾಸ್ಟಿಕ್, ವುಡನ್‍ಗಳು. ಹುಡುಗಿ ಎಷ್ಟೇ ಮೋಡರ್ನ್‍ಆಗಿದ್ದರೂತಮ್ಮ ಕೈಗೆ ಆಗಾಗ ಬಳೆ ತೊಡಿಸದಿರುವುದಿಲ್ಲ. ಮದುವೆ ಹಬ್ಬ ಹರಿದಿನಗಳು ಬಂದರಂತೂ ಹೇಳುವುದೇ ಬೇಡ ಬಳೆಗಳ ಮೇಳವೇ ಬಂದಂತನಿಸುತ್ತದೆ.

ಹೀಗಿರುವಾಗಉತ್ಸವದಲ್ಲಿ ಬಳೆಗಳನ್ನು ಕಣ್ಮನ ಸೆಳೆಯುವಂತೆ ಸಾಲಾಗಿ ಒಂದರ ಹಿಂದೊಂದುಜೋಡಿಸಟ್ಟಿರುತ್ತಾರೆ, ಅದು ಮಹಿಳೆಯರನ್ನು ಅದರತ್ತ ಸೆಳೆಯದಿರುತ್ತದೆಯೇ! ಒಮ್ಮೆ ನೋಡಿ ಬರೋದಕ್ಕೇನಿದೆಎಂದು ನಾನೂ ಹೋಗೇಬಿಟ್ಟೆ, ವಿಧ ವಿಧದ ಬಳೆಗಳ ಸರಮಾಲೆಯೇಅಲ್ಲಿಮಿನುಗುತ್ತಿದ್ದವು, ಅದನ್ನು ನೋಡಿದ ನಾನು ಒಮ್ಮೆಗೆಕಂಬದಂತೆ ನಿಂತುಬಿಟ್ಟೆ. ಅಲ್ಲಿದ್ದ ಮಹಿಳೆಯರೆಲ್ಲರೂ ನನಗೆ ಈ ಬಳೆಯಾಗಬಹುದು, ಹೇಗೆ ಕಾಣಿಸ್ತಿದೆ ಅಂತೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ವಿಪರ್ಯಾಸವೇನೆಂದರೆಅಷ್ಟೊಂದುಚಂದದ ಬಳೆಗಳಲ್ಲಿ ನಮಗೆ ಬೇಕಾದ ಬಳೆಗಳನ್ನು ಆಯ್ಕೆ ಮಾಡುವುದೇಕಷ್ಟದ ಕೆಲಸ. ಆದರೂ ಕಾಲಿ ಕೈಯಲ್ಲಿ ಹಿಂದಿರುಗಲು ಮನಸ್ಸುಒಪ್ಪುವುದಿಲ್ಲ. ಕೊನೆಗೆ ನಾನೂ ಕೂಡಎರಡುಜೊತೆ ಬಳೆಗಳನ್ನು ಖರೀದಿಸಿದೆ.

Related posts

Leave a Reply

Your email address will not be published. Required fields are marked *