Header Ads
Header Ads
Header Ads
Breaking News

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ : ಭಕ್ತರಿಂದ ಮಂಜುನಾಥನಿಗೆ ಹೂವಿನ ಅಲಂಕಾರ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಪ್ರಯುಕ್ತ ಭಕ್ತಾದಿಗಳು ಹೂವಿನ ಅಲಂಕಾರ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಹದಿನೈದಕ್ಕೂ ಹೆಚ್ಚು ತಂಡಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದು ಸುಮಾರು ಇನ್ನೂರು ಜನರು ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯ ಹೂಗಳ ಜೊತೆಗೆ ಅಪರೂಪದ ಪು?ಗಳಾದ ಕಾರ್ನೇಶನ್, ಲಿಲ್ಲಿ, ಆರ್ಕಿಡ್, ಅಂಥೋರಿಯಂ, ತಾಜ್ ಮಹಲ್ ಗುಲಾಬಿ, ಗ್ರಾಂಡ್ ಕಾಲ ಗುಲಾಬಿ, ಹಸಿರೆಲೆಗಳು ಮುಂತಾದ 40 ಬಗೆಯ ಹೂಗಳು ಅಲಂಕಾರದಲ್ಲಿ ಮಿಂಚಲಿವೆ. ಜೊತೆಗೆ ಅನನಾಸು, ಸೇಬು ಹಣ್ಣುಗಳೂ ಅಲಂಕಾರದಲ್ಲಿರಲಿವೆ.
ಹೂವಿನ ಪ್ರವರ್ತಕರು ಮತ್ತು ಕೆಲಸಗಾರ ಭಕ್ತರು ಸ್ವಇಚ್ಛೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲಂಕಾರದಲ್ಲಿ ತ್ರಿಶೂಲ, ಡಮರುಗ ಆಕೃತಿಗಳು ಅರಳಲಿವೆ. ಸುಮಾರು ಹದಿನೈದು ವರ್ಷ ದಿಂದಲೂ ಭಕ್ತರು ಈ ಸೇವೆ ಸಲ್ಲಿಸುತ್ತಿದ್ದಾರೆ.ಧರ್ಮಸ್ಥಳ ದೇವಾಲಯದ ಪ್ರವೇಶ ಗೇಟ್‌ನಲ್ಲಿ “ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ” ಎಂಬ ಫಲಕ ಭಕ್ತರನ್ನು ಆಕರ್ಷಿಸುತ್ತಿದೆ.
ಈ ವರ್ಷ ಮೂರು ದಿನಗಳ ವಿಶೇಷ ತಯಾರಿ ಮಾಡಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದೇವೆ. ಪೂರ್ತಿ ಒಂದು ದಿನದ ಅವಧಿಯ ಕೆಲಸ ಇಲ್ಲಿ ಮಾಡುತ್ತೇವೆ. ಮಂಜುನಾಥನ ಭಕ್ತಿಯ ಸೇವೆಯೇ ನಮಗೆ ಪ್ರಸಾದ ಎಂದವರು ಬೆಂಗಳೂರಿನ ಶ್ರೀ ಸಾಯಿ ಫ್ಲವರ್ ಡೆಕೋರೇಟರ್ಸ್‌ನ ಮಾಲಕರು. ಅಂದಾಜು ಮೂರರಿಂದ ನಾಲ್ಕು ಲಕ್ಷ ಮೌಲ್ಯದ ಹೂಗಳಿದ್ದು, ನಮಗೆ ಅದಕ್ಕಿಂತ ಮಂಜುನಾಥನ ಭಕ್ತಿ ಮುಖ್ಯ. ಪ್ರತಿ ವರ್ಷವೂ ಇಲ್ಲಿ ಬಂದು ಈ ಸೇವೆ ಮಾಡುವುದರಿಂದ ಏನೋ ಖುಷಿ, ನೆಮ್ಮದಿ ಸಿಗುತ್ತದೆ. ಬಂದಿಲ್ಲದಿದ್ದರೆ ಏನೋ ಕಳೆದುಕೊಂಡಹಾಗೆ ಎಂದು ಹೇಳಿದವರು ಬೆಂಗಳೂರಿನ ರಾಜಾಜಿನಗರ ಫ್ಲವರ್ ಬಾಯ್ಸ್ ತಂಡದ ಮಂಜುನಾಥ್.
ವರದಿ- ಚಿತ್ರಗಳು: ಗಣಪತಿ ದಿವಾಣ

Related posts

Leave a Reply

Your email address will not be published. Required fields are marked *