Header Ads
Header Ads
Breaking News

ಧರ್ಮಸ್ಥಳ ಲಕ್ಷದೀಪೋತ್ಸವ : ಊರಸಂತೆಯ ಸೊಗಡು ನೆನಪಿಸಿದ ಪ್ರದರ್ಶನ ಮಳಿಗೆಗಳು

ಧರ್ಮಸ್ಥಳ ಲಕ್ಷದೀಪೋತ್ಸವಎಂದರೆಎಲ್ಲಿಲ್ಲದ ಸಂಭ್ರಮ. ದೀಪಗಳಿಂದ ಕಂಗೊಳಿಸುವ ದೇವಾಲಯ, ಹಾದಿ-ಬೀದಿಗಳು, ಅಂಗಡಿ- ಮುಂಗಟ್ಟುಗಳು. ಬಹಳ ವಿಜೃಂಭಣೆಯಿಂದ ನಡೆಯುವ ಕಾರ್ಯಕ್ರಮಗಳು ಎಲ್ಲರನ್ನು ಸೆಳೆಯುತ್ತವೆ. ನಾನಾ ಕಡೆಯಿಂದ ಆಗಮಿಸಿದ ಭಕ್ತರನ್ನು ಆಕರ್ಷಿಸಿದ್ದು, ಈ ವಸ್ತು ಪ್ರದರ್ಶನ ಮಳಿಗೆಗಳು. ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿಜನರ ಭಾಗವಹಿಸುವಿಕೆಯನ್ನುಇಲ್ಲಿಕಾಣಬಹುದಾಗಿತ್ತು. ಇಷ್ಟೊಂದುಜನರನ್ನುಆಕರ್ಷಿಸಲು, ಮುಖ್ಯಕಾರಣವಿದೆ.
ಇಲ್ಲಿಯ ವಿಶೇಷವೆಂದರೆ ದೀಪೋತ್ಸವ ಪ್ರಾರಂಭವಾಗುವಒಂದು ತಿಂಗಳು ಮುಂಚಿತವಾಗಿಅರ್ಜಿಯನ್ನು ಸಲ್ಲಿಸಿ, ಪೂಜ್ಯಖಾವಂದರಆದೇಶದ ಮೇರೆಗೆಆಯ್ಕೆಯಾದವರು ಮಾತ್ರಇಲ್ಲಿ ಮಳಿಗೆ ಹಾಕಲು ಅವಕಾಶವಿರುತ್ತದೆ. ಅವರಿಗೆ ಪ್ರತ್ಯೇಕ ಶುಲ್ಕವಿದೆ.ಶುಲ್ಕ ನೀಡಲಾಗದಷ್ಟು ಬಡವರಿದ್ದರೆಉಚಿತವಾಗಿ ಮಳಿಗೆ ನೀಡಿದ ಉದಾಹರಣೆಗಳು ಇವೆ.
ವಿಶೇಷವೆಂದರೆಕಾರ್ತಿಕ ಮಾಸದಲ್ಲಿ ಪ್ರಾರಂಭವಾಗುವ ಈ ಲಕ್ಷದೀಪೋತ್ಸವದಲ್ಲಿ ಮೊದಲುಅಂಗಡಿ ಹಾಕಿ ನಂತರ ಬೇರೆ ಬೇರೆ ಉತ್ಸವಗಳಿಗೆ ಹೋಗುವ ನಂಬಿಕೆಯೂಇದೆ. ಇಲ್ಲಿ ಕೇವಲ ವಸ್ತು ಪ್ರದರ್ಶನ ಮಾತ್ರವಲ್ಲದೆ ನಾನಾ ಪ್ರಕಾರದಒಟ್ಟು 197 ಮಳಿಗೆಗಳನ್ನು ಹಾಕಲಾಗಿದೆ.ಒಂದುಕಟ್ಟುನಿಟ್ಟಾದಕ್ರಮದಲ್ಲಿ ಈ ಪ್ರಕ್ರಿಯೆ ನಡೆದುಕೊಂಡುಬರುತ್ತಿರುವುದು ವಿಶೇಷ,ಇಲ್ಲಿ ಸರಕಾರಿ ಮಳಿಗೆಗಳು, ಅಂಚೆ ಇಲಾಖೆ, ಪುಸ್ತಕ ಮಳಿಗೆಗಳು, ವಾಹನ ಪ್ರದರ್ಶನ ಮಳಿಗೆಗಳು, ಕೃಷಿ ಯಂತ್ರೋಪಕರಣಗಳು, ರುಡ್‌ಸೆಟ್ ಬಜಾರ್, ಎಸ್.ಕೆ.ಡಿ.ಆರ್.ಪಿ ಪರಿಚಯ ಮಳಿಗೆ, ತಿಂಡಿ/ತಿನಿಸುಗಳು, ವಸ್ತ್ರ ಮಳಿಗೆಗಳು, ತರಕಾರಿ ಬೀಜಗಳು, ಕರಕುಶಲ ವಸ್ತುಗಳು, ಗೋಬರ್‌ಗ್ಯಾಸ್, ನಾಟಿ ಔಷದಿ, ಕ್ಯಾಂಪ್ಕೋಚಾಕಲೇಟ್ ಉತ್ಪನ್ನಗಳು, ನೀರು ಶುದ್ಧೀಕರಣಘಟಕಇತ್ಯಾದಿ.

ಈ ವರ್ಷದ ವಿಶೇಷವೆಂದರೆ ಮನೆಯಲ್ಲಿಯೇ ತಯಾರಿಸಿ ಮಾರಾಟಮಾಡುವ ವಸ್ತುಗಳಿಗೆ ಹೆಚ್ಚಿನಆದ್ಯತೆ ನೀಡಲಾಗಿದೆ. ಮಾಹಿತಿ ನೀಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ತೆರೆನಾದ ಅವಕಾಶಗಳು ಸಣ್ಣ ವ್ಯಾಪಾರಿಗಳಿಗೆ ಜನರನ್ನುತಮ್ಮತ್ತ ಸೆಳೆಯಲು ಬಹಳ ಉಪಕಾರಿಯಾಗಿದೆ. ಜೊತೆಯಲ್ಲೇ ವಸ್ತು ಪ್ರದರ್ಶನ ಮಳಿಗೆಗಳನ್ನು ನೋಡಲು ಬರುವ ಸಾರ್ವಜನಿಕರಿಗೆತಮ್ಮ ವಿವಿಧ ಆಯ್ಕೆಗಳನ್ನು ಒಂದೆಡೆಕಾಣುವಲ್ಲಿ ಸಹಾಯವಾಗಿದೆ. ಲಕ್ಷದೀಪೋತ್ಸವದ ಈ ಚಿಕ್ಕಚಿಕ್ಕ ಅಂಗಡಿಗಳು ಸಣ್ಣ ವ್ಯಾಪಾರಿಗಳ ಮತ್ತು ಸಾಮಾನ್ಯಜನರ ಪಾಲಿನ ಹಬ್ಬವಾಗಿದೆಎಂದರೆತಪ್ಪಗಲಾರದು.
ವರದಿ: ಮಂಜುನಾಥಎಸ್.
ಚಿತ್ರಗಳು: ಗೌರಮ್ಮಕೆ.ಬಿ

Related posts

Leave a Reply

Your email address will not be published. Required fields are marked *