

ಮಾನವೀಯ ಮೌಲ್ಯಗಳ ಜೊತೆಗೆ ಬದುಕಿದರೆ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಬಹುದು ಎಂದು ಜೀವನಕೌಶಲ ಮತ್ತು ಉದ್ಯಮಶೀಲತೆ ಬೋಧಿಸುವ ಫೋಕಸ್ ಅಕಾಡೆಮಿಯ ಡಿ.ಟಿ.ರಾಮಾನುಜನ್ ಹೇಳಿದರು. ಅವರು ಧರ್ಮಸ್ಥಳ ಲಕ್ಷದೀಪೋತ್ಸವದ 87 ನೇ ಸರ್ವಧರ್ಮ ಸಮ್ಮೇಳನದಲ್ಲಿ ’ಜೀವನ ಮತ್ತು ಮೌಲ್ಯಗಳ’ ಕುರಿತು ಉಪನ್ಯಾಸ ನೀಡಿದರು. ಎಲ್ಲವನ್ನೂ ಉದಾರವಾಗಿ ಕೊಡುವ ದೇವರಿಂದ ನಮ್ಮ ಅಗತ್ಯವನ್ನ? ತೆಗೆದುಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಆಸೆ ಆಕಾಂಕ್ಷೆಗಳ ಪ್ರಮಾಣ ಕಡಿಮೆಯಿದ್ದಲ್ಲಿ ಆಮಿಗಳಿಗೆ ನಮ್ಮ ಮನಸ್ಸು ಬಲಿಯಾಗುವುದಿಲ್ಲ. ಆಗ ಮಾತ್ರ ಮೌಲ್ಯಯುತ ಜೀವನ ನಡೆಸಬಹುದು ಎಂದು ವಿವರಿಸಿದರು. ಖುಷಿಯನ್ನು ಹೊರಗೆ ಹುಡುಕಿ ಪ್ರಯೋಜನವಿಲ್ಲ. ನಮ್ಮೊಳಗಿನ ಆಂತರ್ಯದ ಖುಷಿಯ ಕಡೆ ನಮ್ಮ ಗಮನವಿರಬೇಕು. ಹತ್ತು ರೂಪಾಯಿ ಉಳಿಸಲು ಐನೂರು ರೂಪಾಯಿ ಖರ್ಚು ಮಾಡುವ ಹಂತಕ್ಕೆ ಹೋಗಬಾರದು. ಇರುವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆ ಕಲಿಯಬೇಕು ಎಂದು ಕರೆನೀಡಿದರು.
ವರದಿ: ಗುರುಗಣೇಶ ಭಟ್, ಡಬ್ಗುಳಿ ಚಿತ್ರಗಳು: ಸ್ಕಂದ ಆಗುಂಬೆ