Header Ads
Header Ads
Header Ads
Breaking News

ಧರ್ಮಸ್ಥಳ ಲಕ್ಷದೀಪೋತ್ಸವ : ‘ಕನ್ನಡ ಕೋಗಿಲೆ’ಗಳ ಹಾಡು

ಸಂಜೆ ಸೂರ್ಯನ ಪ್ರಖರತೆಕಡಿಮೆ ಆಗುವ ಹೊತ್ತಲ್ಲಿ ಬಣ್ಣ-ಬಣ್ಣದ ದೀಪಾಲಂಕಾರ ಕಂಗೊಳಿಸುತ್ತಿತ್ತು. ಹೂವಿನ ಅಲಂಕಾರ, ದೀಪಗಳ ಬೆಳಕಲ್ಲಿ ಕಂಗೊಳಿಸುತ್ತಿದ್ದ ಧರ್ಮಸ್ಥಳ ಎಂದಿನಂತೆಇರಲಿಲ್ಲ. ಒಂದುಕಡೆದೇವರ ಭಕ್ತಿಯಲ್ಲಿ ಮಗ್ನರಾಗಿತಮ್ಮ ವಯಸ್ಸನ್ನೂ ಲೆಕ್ಕಿಸದೇಪಾದಯಾತ್ರೆಯಲ್ಲ್ರಿಸಾಗಿಬಂದಜನರು, ಇನ್ನೊಂದುಕಡೆಕರಕುಶಲ ವಸ್ತುಗಳ ಪ್ರದರ್ಶನದೊಂದಿಗೆ ಸ್ವಾವಲಂಬನೆಯತತ್ವಕ್ಕೆ ಮಾದರಿಯಾದವರು.ಇದರ ಮಧ್ಯದಲ್ಲಿಕಿಕ್ಕಿರಿದಿದ್ದಜನರಿಗೆತಮ್ಮಇಂಪಾದ ಕಂಠಸ್ವರಗಳಲ್ಲಿ ದೇವರ ಭಕ್ತಿಗೀತೆ, ಜನಪ್ರಿಯ ಹಾಡುಗಳನ್ನು ಉಣಬಡಿಸುವ ಸಂಗೀತರಸದೌತಣ.

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಥಮ ದಿನದಂದು ವಸ್ತು ಪ್ರದರ್ಶನ ಮತ್ತು ಸಾಂಸ್ಕ್ರತಿಕಕಾರ್ಯಕ್ರಮದಲ್ಲಿಖ್ಯಾತಗಾಯಕಿ ಹಾಗೂ ಕಲರ್ಸ್‍ಕನ್ನಡರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ ಸೀಸನ್ 1 ರ ಸೆಮಿ ಪೈನಲ್‍ವರೆಗೆ ಬಂದ ಕು.ಸುರಕ್ಷಾದಾಸ್ ಮತ್ತುಗಾಯಕಗಣೇಶ್‍ಕಾರಂತ್‍ಅವರತಂಡದ ಪ್ರತಿಭಾನ್ವಿತರು ಹಾಡುಗಳನ್ನು ಹಾಡಿ ಭಕ್ತರನ್ನುಸೆಳೆದರು.
ಯಾವುದೇಕಾರ್ಯಕ್ರಮಆರಂಭವಾಗಬೇಕಾದರೂಅದು ವಿಘ್ನವನ್ನು ಕಳೆಯುವ ವಿಘ್ನೇಶ್ವರನ ಶೃತಿಯಿಂದಆರಂಭವಾಗುವುದು ವಾಡಿಕೆ. ವಿಘ್ನೇಶ್ವರನನ್ನು ನೆನಯುತ್ತತಮ್ಮಆರಂಭದ ಗೀತೆಗಳಿಂದ ಭಕ್ತರನ್ನು ಭಕ್ತಿಯಲ್ಲಿತಲ್ಲೀನರಾಗುವಂತೆ ಮಾಡಿದರು. ಕು. ಸುರಾಕ್ಷದಾಸ್‍ರ ಸಿರಿಕಂಠದಿಂದ ಹೊಮ್ಮಿದಗೀತೆಗಳು ಜನರಿಗೆರಸದೌತಣವನ್ನೇ ನೀಡಿದವು. ಇವರಗಾಯನಎಲ್ಲ ಸಂಗೀತ ಪ್ರೇಮಿಗಳ ಗಮನ ಸೆಳೆಯಿತು. ಕು.ಸುರಕ್ಷಾದಾಸ್ ಮೂಲತ: ಶಿವಮೊಗ್ಗದವರು. ಪ್ರಸುತ್ತಎಲ್.ಎಲ್.ಬಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸನಿರತರು.ಇವರು ಶಾಸ್ತ್ರೀಯ ಸಂಗೀತವನ್ನು 18 ವರ್ಷದಿಂದ ಅಭ್ಯಸಿಸುತ್ತಿದ್ದಾರೆ. ಕಲರ್ಸ್‍ಕನ್ನಡದ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ ಸೀಸನ್ 1ರಲ್ಲಿ ಸೆಮಿಫೈನಲ್‍ವರೆಗೆ ಬಂದುತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವರು. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರದೇಶದಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ಟಿ.ಎಸ್. ನಾಗಾಭರಣಅವರ‘ಕಾನೂರಾಯಣ’ಚಿತ್ರದಲ್ಲಿ ಹಿನ್ನಲೆಧ್ವನಿಯನ್ನು ನೀಡಿದ್ದಾರೆ. ಕೇವಲ ಸಂಗೀತವಲ್ಲದೆ ಭರತನಾಟ್ಯ ವಿದ್ವತ್ ಪ್ರವೀಣೆಕೂಡ ಹೌದು.

ಇವರಿಗೆ ಸಾಥಿ ನೀಡಿದಇನ್ನೊಬ್ಬಗಾಯಕಗಣೇಶ್‍ಕಾರಂತ್. ಇವರು ಮೂಲತ: ಉಡುಪಿಯವರು. ಪ್ರಸುತ್ತ ಬೆಂಗಳೂರಿನಲ್ಲಿ ಸಾಫ್ಟ್‍ವೇರ್‍ಇಂಜಿನಿಯರ್ ಆಗಿ ಕಾರ್ಯ ರ್ನಿವಹಿಸುತ್ತಿದ್ದರೆ. ರೇಡಿಯೋ ಸಿಟಿ ಸೂಪರ್ ಸಿಂಗರ್ ಸೀಸನ್ 8ರಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಕನ್ನಡ ಕೋಗಿಲೆ ಸೀಸನ್1ರ ಪೈನಲ್‍ವರೆಗೆತಲುಪಿದ್ದವರು. ಹೊರದೇಶಗಳಲ್ಲಿಯೂಕಾರ್ಯಕ್ರಮವನ್ನು ನೀಡಿರಮೇಶ್‍ಅರವಿಂದ್‍ಅವರ 100 ನೇ ಚಿತ್ರವಾದ ‘ಪುಷ್ಪಕ ವಿಮಾನ’ಕ್ಕಾಗಿಯೂ ಹಾಡಿದ್ದಾರೆ. ಸುಮಾರು 8 ಕನ್ನಡ ಚಿತ್ರಗಳಿಗೆ ಹಿನ್ನಲೆಧ್ವನಿಯಾಗಿದ್ದಾರೆ. ಇವರೊಂದಿಗೆರಿದಮ್‍ಪ್ಯಾಡ್ ಮೋನಿಕ್ ಜೈಶೀಲನ್, ಕೀಬೋರ್ಡ್ ಮೆಲ್ವಿನ್, ತಬಲ ರಮೇಶ್, ಗಿಟಾರ್ ವಿನಯ್ ಶೃತಿಕ್ಕನುಗುಣವಾಗಿ ತಾಳವನ್ನು ನೀಡುತ್ತಿದ್ದರು.

ದೈವ ಸನ್ನಿಧಿಯಲ್ಲಿ ಶಿವನಾಮದ ಅನೇಕ ಹಾಡುಗಳನ್ನು ಹಾಡಿದರು. ‘ಓಂ ಶಿವೋಹಂ’ ಗೀತೆಯಿಂದ ಕಲಾಭಿಮಾನಿಗಳನ್ನು ಸೆಳೆದರು. ‘ಅನಂದ ಪರಮಾನಂದ’ ಗೀತೆಯಿಂದಜನಮನಗೆದ್ದರು. ಕು.ಸುರಕ್ಷಾದಾಸ್ ಹಾಡಿದಗೀತೆ ‘ನೋಡಿ ಸ್ವಾಮಿ ನಾವಿರೋದು ಹೀಗೆ’ರಂಜಿಸಿತು.‘ಪಲ್ಲವಿ-ಅನುಪಲ್ಲವಿ’ಚಿತ್ರದ’ನಗುವ ನಯನ ಮಧುರ ಮೌನ’ಗೀತೆಆಪ್ತವೆನ್ನಿಸಿತು. ಅದರಭಾವ ಮಾಧುರ್ಯ ಕೇಳುಗರನ್ನು ಹಿಡಿದಿಟ್ಟಿತು.

Related posts

Leave a Reply

Your email address will not be published. Required fields are marked *