Header Ads
Breaking News

ಧೈತ್ಯಾಕಾರದ ಆಲದ ಮರಕ್ಕೆ ಬೆಂಕಿ : ಆತಂಕದಲ್ಲಿ ಉದ್ಯಾವರದ ಸ್ಥಳೀಯ ಜನತೆ

ಮಂಜೇಶ್ವರ: ಕುಂಜತ್ತೂರು ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಸಾರ್ವಜನಿಕರಿಗೆ ನೆರಳನ್ನು ನೀಡುತಿದ್ದ ಬೃಹತ್ತಾಕಾರದ ಆಳದ ಮರವೊಂದು ಕಳೆದ ಮೂರೂ ದಿವಸಗಳಿಂದ ಹೊತ್ತಿ ಉರಿಯುತ್ತಿದ್ದರೂ ಈ ತನಕ ಅದನ್ನು ನಂದಿಸಲು ಸಾಧ್ಯವಾಗದೆ ಇರುವುದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.

ಎರಡು ದಿನಗಳಿಂದ ಅಗ್ನಿಶಾಮಕ ಧಳ ಸಿಬ್ಬಂದಿಗಳು ಆಗಮಿಸಿ ಧಗ ಧಗನೆ ಉರಿಯುತ್ತಿರುವ ಮರ ಬೆಂಕಿಯನ್ನು ನಂದಿಸುತಿದ್ದರೂ ಮರುದಿನ ಬೆಳಿಗ್ಗೆ ಅದೇ ರೀತಿ ಮತ್ತೆ ಉರಿಯುತ್ತಿದೆ. ರಾಷ್ಟೀಯ ಹೆದ್ದಾರಿ ಬದಿಗಿರುವ ಈ ಮರ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ನೆರಳನ್ನು ನೀಡುತಿತ್ತು. ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿದೆ. ಅಪ್ಪಿ ತಪ್ಪಿ ಭಾರಿ ಗಾತ್ರವಿರುವ ಈ ಮರದ ರೆಂಬೆಗಳೇನಾದರೂ ಮುರಿದು ಬಿದ್ದರೆ ಅಪಾಯ ತಪ್ಪಿದ್ದಲ್ಲ. ಬುಡದಿಂದಲೇ ಉರಿಯುತ್ತಿರುವ ಕಾರಣ ಯಾವುದೇ ಸಮಯದಲ್ಲೂ ಮರ ಮುರಿದು ಬೀಳುವ ಸಾಧ್ಯತೆ ಇದೆ. ಮರವನ್ನು ಕಡಿದು ತೆಗೆಯಲು ಸಂಬಂಧಪಟ್ಟವರತ್ತೀರಾ ಊರವರು ಹಲವಾರು ಸಲ ವಿನಂತಿಸಿಕೊಂಡರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ. ದುರಂತ ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟವರು ಎಚ್ಛೆತ್ತುಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ .

Related posts

Leave a Reply

Your email address will not be published. Required fields are marked *