Header Ads
Breaking News

ನಂತೂರು ಸುರತ್ಕಲ್ ಹೆದ್ದಾರಿ ದುರಸ್ಥಿಗೆ ಆಗ್ರಹ:ವಿವಿಧ ಸಂಘಟನೆಗಳಿಂದ ಪಾದಯಾತ್ರೆ

ಸುರತ್ಕಲ್ ಎನ್‌ಐಟಿಕೆ ಸಮೀಪ ಇರುವ ಟೋಲ್ ಗೇಟ್ ಮುಚ್ಚಬೇಕು. ನಂತೂರು ಸುರತ್ಕಲ್ ಹೆದ್ದಾರಿ ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕೂಳೂರಿನಲ್ಲಿ ಚಾಲನೆ ನೀಡಲಯಿತು.ಕಳಪೆ ರಸ್ತೆ ನಿರ್ಮಿಸಿ ದುಬಾರಿ ಟೋಲ್ ಪಡೆಯುವ ಹೆದ್ದಾರಿ ಇಲಾಖೆಯ ಕ್ರಮಕ್ಕೆ ಇದೀಗ ಸಂಘಟನಾತ್ಮಕ ರೂಪ ಪಡೆದುಕೊಳ್ಳುತ್ತಿದೆ. ಸರ್ವಿಸ್ ರಸ್ತೆಯ ಕೊರತೆ, ಚರಂಡಿಯ ಅಸಮರ್ಪಕತೆ, ಮಳೆಗೆ ಎದ್ದು ಹೋಗಿರುವ ಡಾಮರು, ಒಂದೇ ರಸ್ತೆಗೆ ಮೂರು ಕಡೆ ಟೋಲ್ ಸಂಗ್ರಹ ಕೇಂದ್ರಗಳ ವಿರುದ್ಧ ಹೋರಾಟ ನಡೆಯಲಿದೆ. ಪಕ್ಕದಲ್ಲಿಯೇ ಫಲ್ಗುಣಿ ನದಿ ಹರಿಯುತ್ತಿರುವುದರಿಂದ ಒಂದಿಷ್ಟು ಮುತುವರ್ಜಿ ವಹಿಸಿದರೆ ಮಳೆ ನೀರು ನದಿಗೆ ಸೇರುವ ವ್ಯವಸ್ಥೆ ಮಾಡಬಹುದಿತ್ತು.

ಆದರೆ ಇಚ್ಛಾ ಶಕ್ತಿಯ ಕೊರತೆಯಿಂದ ಕೂಳೂರು ಭಾಗದಲ್ಲಿ ಈ ಸಮಸ್ಯೆ ಕಳೆದ 2015ರಿಂದ ಈ ವರೆಗೆ ಮುಂದುವರಿದಿದೆ.ಮಳೆಗೆ ಅಲ್ಲಲ್ಲಿ ಕಾಣುವ ಹೊಂಡ, ಡಾಮರು ಕಿತ್ತು ಮಣ್ಣು ಕಾಣುತ್ತಿರುವ ಸರ್ವಿಸ್ ರಸ್ತೆಗಳು. ಹೆಜ್ಜೆ ಹೆಜ್ಜೆಗೂ ಗುಂಡಿಗಳೇ ತುಂಬಿಕೊಂಡಿರುವ ಹೆದ್ದಾರಿ 66ರ ಹೊನ್ನಕಟ್ಟೆ ಮತ್ತು ಬೈಕಂಪಾಡಿ ಮರಣ ಗುಂಡಿಗಳು ಇಂದು ನಿನ್ನೆಯದಲ್ಲ. ಪಾರಂಪರಿಕವಾಗಿ ಮಳೆಗಾಲ ಹಾಗೂ ಮಳೆಗಾಲ ಮುಗಿದ ಬಳಿಕ ಇದು ಶಾಶ್ವತವಾಗಿ ಕಾಣಸಿಗುತ್ತದೆ. ಇವುಗಳಿಗೆ ಇನ್ನೂ ಶಾಶ್ವತ ಪರಿಹಾರ ಹುಡುಕಲಾಗಿಲ್ಲ.ಸುರತ್ಕಲ್ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೊ ಚಾಲಕರ ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೊ ಚಾಲಕರ ಸಂಘ, ಸುರತ್ಕಲ್ ಅಟೋ ಚಾಲಕರ ಯೂನಿಯನ್, ಆನ್‌ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್, ನಾಗರಿಕ ಸಮಿತಿ ಕುಳಾಯಿ ಮೊದಲಾದ ಸಂಘಟನೆಗಳು ಪ್ರತಿಭಟನೆಯಲ್ಲಿ ಕೈಜೋಡಿಸಿದರು.ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಉಪಮೇಯರ್ ಮುಹಮ್ಮದ್ ಕುಂಜತ್‌ಬೈಲ್ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಂಗಳೂರು ಪಾಲಿಕೆಯ ಸದಸ್ಯರಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ ಮೊದಲಾದವರು ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದರು.

Related posts

Leave a Reply