Header Ads
Breaking News

ನಂದಾದೀಪ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ಸ್‌ನ ಮಾದರಿ ಫ್ಲ್ಯಾಟ್ ಉದ್ಘಾಟನೆ

ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಪ್ರತಿಷ್ಠಿತ ಭಾರ್ಗವಿ ಬಿಲ್ಡರ್‍ಸ್ ಆಂಡ್ ಡೆವೆಲಪರ್‍ಸ್ ವತಿಯಿಂದ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಂದಾದೀಪ್ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್ ಮಂಗಳೂರಿನ ಉರ್ವ ಮಾರಿಗುಡಿ ದೇವಸ್ಥಾನದ ಬಳಿ ನಿರ್ಮಾಣಗೊಳ್ಳುತ್ತಿದೆ. ಈ ವಸತಿಸಮುಚ್ಚಯದ ಮಾದರಿ ಫ್ಲ್ಯಾಟ್‌ನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. 

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಾ ಬಂದಿರುವ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆ ಭಾರ್ಗವಿ ಬಿಲ್ಡರ್‍ಸ್ ಆಂಡ್ ಡೆವಲಪರ್‍ಸ್ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ನಂದಾದೀಪ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್‌ನ್ನು ಮಂಗಳೂರಿನ ಉರ್ವ ಮಾರಿಗುಡಿಯ ಬಳಿ ನಿರ್ಮಿಸುತ್ತಿದೆ. ನಂದಾದೀಪ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್‌ನ ಮಾದರಿ ಫ್ಲ್ಯಾಟ್‌ನ ಉದ್ಘಟನಾ ಸಮಾರಂಭ ಇಂದು ನಡೆಯಿತು. ಬೆಂಗಳೂರಿನ ಬುರಾನಿ ರಿಯಲ್ ಎಸ್ಟೇಟ್‌ನ ಮಾಲಕರಾದ ಸಂತೋಶ್ ಬುರಾನಿಯವರು ರಿಬ್ಬನ್ ಕತ್ತರಿಸುವ ಮೂಲಕ ಫ್ಲ್ಯಾಟ್‌ನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ನಿರ್ಮಾಣಗೊಂಡ ಮಾದರಿ ಫ್ಲ್ಯಾಟ್ ಉತ್ತಮ ಡಿಸೈನಿಂಗ್ ಮತ್ತು ಉತ್ತಮ ಸ್ಪೇಸ್ ಹೊಂದಿದೆ. ನಾವು ಏನು ಗಳಿಸುತ್ತೇವೆಯೋ ಅದನ್ನು ನಾವು ಪುನ: ಗ್ರಾಹಕರಿಗೆ ನೀಡುವುದಾಗಿರಬೇಕು. ನಾವು ಗೆಳೆತನ ಹತ್ತಿರದವರೊಂದಿಗೆ ಮಾಡುವುದಿಲ್ಲ ನಾವು ಯಾರೊಂದಿಗೆ ಗೆಳೆತನ ಮಾಡುತ್ತೇವೆಯೋ ಅವರು ನಮಗೆ ಹತ್ತಿರವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಸ್ತಿ ಪುರುಶೋತ್ತಮ ಶೆಣೈ ಅವರು, ಉತ್ತಮ ರೀತಿಯಲ್ಲಿ ಒಂದು ಮೋಡರ್ನ್ ಮಾದರಿ ಪ್ಯಾಟನ್ನು ನಿರ್ಮಾಣಗೊಂಡಿದೆ. ಜನತೆಗೆ ನಿರ್ಮಾಣ್ ಹೋಮ್ಸ್ ಮೇಲೆ ಅಪಾರ ನಂಬಿಕೆಯಿದೆ ಎಂದು ನಿರ್ಮಾಣ ಕ್ಷೇತ್ರದ ತಮ್ಮ ಅನುಭವವನ್ನು ಹಂಚಿಕೊಂಡರು. 

ಈ ವೇಳೆ ನಾಯಕ್ ಪೈ ಆಂಡ್ ಅಸೋಸಿಯೇಟ್ಸ್‌ನ ಸುರೇಶ್ ಪೈ ಮಾತನಾಡಿ, ನಿರ್ಮಾಣ ಹಂತದಲ್ಲಿ ಒಂದು ಮಾದರಿ ಫ್ಲ್ಯಾಟ್‌ನ್ನು ಉದ್ಘಾಟನೆ ಮಾಡಿ ಜನರಿಗೆ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಕೆಲವೇ ಕೆಲವು ಬಿಲ್ಡರ್‌ಗಳು ಇಂತಹಾ ಪ್ರಯತ್ನ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣೇಶ್ ಶರ್ಮ ಅವರು ಮಾತನಾಡಿ ಅನೇಕರು ಪ್ಯಾಟ್ ನಿರ್ಮಿಸುವಾಗ ಪ್ರೋಮಿಸ್ ಮಾಡುತ್ತಾರೆ. ಆದರೆ ಎಲ್ಲವನ್ನೂ ಈಡೇರಿಸಲು ಸಾಧ್ಯವಾಗಿರುವುದಿಲ್ಲ. ಆದರೆ ನಂದಾದೀಪ ಪ್ಯಾಟ್‌ನಲ್ಲಿ ನೀಡಿದ ಎಲ್ಲಾ ಪ್ರೋಮಿಸ್‌ಗಳನ್ನು ನೆರವೇರಿಸಿದ್ದಾರೆ ಎಂದು ಶುಭಹಾರೈಸಿದರು.
ಬಳಿಕ ನಿರ್ಮಾಣ್ ಹೋಮ್ಸ್‌ನ ಗುರುದತ್ತ್ ಶೆಣೈ ಮಾತನಾಡಿ ಫ್ಲ್ಯಾಟ್‌ನ ಸಂಪೂರ್ಣ ರೂಪುರೇಷೆಯನ್ನು ವಿವರಿಸಿದರು. 


ಈ ಸಂದರ್ಭ ಅನೇಕ ಗಣ್ಯರು ಉಪಸ್ಥಿತರಿದ್ದು, ಸಂಭ್ರಮದಲ್ಲಿ ಪಾಲ್ಗೊಂಡರು. ಮಂಗಳೂರಿನ ಉರ್ವ ಮಾರಿಗುಡಿಯ ಅಪೂರ್ವ ಪರಿಸರದಲ್ಲಿ ನಿರ್ಮಾಣಗೊಳ್ತಾ ಇರುಚ ನಂದಾದೀಪ್ ಅಪಾರ್ಟ್‌ಮೆಂಟ್ಸ್ ಅತ್ಯುತ್ತಮವಾದ ಸೌಲಭ್ಯಗಳು, ಸೌಕರ್ಯಗಳನ್ನು ಒಳಗೊಂಡಿದೆ. ಸ್ವಿಮ್ಮಿಂಗ್ ಪೂಲ್, ಸೋಲಾರ್ ಲೈಟಿಂಗ್ಸ್, ಜನರೇಟರ್ ಬ್ಯಾಕಪ್, ಇನ್‌ಡೋರ್ ಗೇಮ್ಸ್, ಅಗ್ನಿ ನಿರೋಧಕ ವ್ಯವಸ್ಥೆ, ವೀಡಿಯೋ ಡೋರ್ ಫೋನ್, ಏರ್‌ಕಂಟಿಷನ್ಡ್ ಜಿಮ್, ಇಂಟರ್‌ಕಾಂ, ಸೆಕ್ಯುರಿಟಿ ಗಾರ್ಡ್ ರೂಂ, ಸಿಸಿಟಿವಿ ಕ್ಯಾಮೆರಾ, ಸೋಲಾರ್ ವಾಟರ್ ಹೀಟರ್, ಜಾಗಿಂಗ್ ಟ್ರ್ಯಾಕ್, ವಿಶಾಲವಾದ ವಿಸಿಟರ್‍ಸ್ ಲಾಂಜ್, ಡ್ರೈವರ್‌ಗಳಿಗೆ ವಿಶೇಷ ವ್ಯವಸ್ಥೆ, ವೈಫೈ ಕನೆಕ್ಟಿವಿಟಿ, ಮಲ್ಟಿಪರ್ಪಸ್ ಪಾರ್ಟಿ ಹಾಲ್, ಪ್ಯಾಸೆಂಜರ್ ಲಿಫ್ಟ್, ಪೂಲ್ ಪಾರ್ಟಿ ಸ್ಪೇಸ್, ಸರ್ವೆಂಟ್ಸ್ ಡಾರ್ಮೆಟರಿ, ಯೋಗ ಪೆವಿಲಿಯನ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, ಲೈಬ್ರೆರಿ ಇತ್ಯಾದಿ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಅತ್ಯುತ್ತಮವಾದ ಸೂರು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

Related posts

Leave a Reply

Your email address will not be published. Required fields are marked *