Header Ads
Header Ads
Breaking News

ನಂದಾವರದಲ್ಲಿ ಶರತ್ ಮಡಿವಾಳ ಶ್ರದ್ಧಾಂಜಲಿ ಸಭೆ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಂದಾವರದವರೆಗೆ ಅಲ್ಲಲ್ಲಿ ನಾಕಾಬಂಧಿ

ಇತ್ತೀಚೆಗೆ ಹಂತಕರಿಗೆ ಬಲಿಯಾದ ಶರತ್ ಮಡಿವಾಳ ಅವರ ಉತ್ತರ ಕ್ರಿಯೆ ಗುರುವಾರ ನಂದಾವರದ ನಂದಾದೀಪ ಸಭಾಂಗಣದಲ್ಲಿ ನಡೆಯಿತು.
ಮುನ್ನೆಚ್ಚರಿಕೆಯ ಅಂಗವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಬಿ.ಸಿ.ರೋಡಿನಿಂದ ನಂದಾವರದವರಗೆ ಅಲ್ಲಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸಲಾಯಿತು. ಪ್ರಮುಖ ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು. ಕ್ಷಿಪ್ರ ಪೋಲಿಸ್ ಪಡೆ ನಂದಾವರದಲ್ಲಿ ಪರೇಡ್ ನಡೆಸಿತು. ಐಜಿಪಿ ಹರಿಶೇಖರನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ರೌಂಡ್ಸ್ ಮೂಲಕ ಪರಿಸ್ಥಿತಿ ಅವಲೋಕಿಸಿದರು.

ನಂದಾದೀಪ ಸಭಾಂಗಣದಲ್ಲೊ ಶ್ರದ್ದಾಂಜಲಿ ಸಭೆ ನಡೆಸಲಾಯಿತು. ಆರ್ ಎಸ್ ಎಸ್ ಮುಖಂಡ ಡಾ ಪ್ರಭಾಕರ ಭಟ್, ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್, ಪದ್ಮನಾಭ ಕೊಟ್ಟಾರಿ, ದೇವದಾಸ್ ಶೆಟ್ಟಿ ಮತ್ತಿತರ ಪ್ರಮುಖರು ಹಾಜರಿದ್ದರು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply