Header Ads
Header Ads
Breaking News

ನಂದಿಕೂರಮ್ಮನ ಜುಟ್ಟಿನಂತಿದ್ದ ಕಾಡುಕತ್ತರಿಸಿದ ಹಿನ್ನೆಲೆ ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ..

 
ದೇವರ ಕಾಡು ಎಂಬುದಾಗಿ ಪ್ರಸಿದ್ಧಿಯಲ್ಲಿದ್ದ ಸುಜ್ಲಾನ್ ಮುಖ್ಯ ದ್ವಾರದ ಬಳಿ ಇದ್ದ ಕಾಡನ್ನು ಏಕಾಏಕಿ ಕಡಿದು ನೆಲಸಮಗೊಳಿಸುವ ಮೂಲಕ, ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ಮಾಡಿದ್ದಲ್ಲದೆ, ಕಂಪನಿ ಅಧಿಕಾರಿಗಳು ತೀರಿಸಲಾಗದ ಸಾಲ ಮಾಡಿದಂತ್ತಾಗಿದೆ ಆ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲಾ ಸೇರಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ತಾ.ಪಂ. ಸದಸ್ಯ ದಿನೇಶ್ ಪಲಿಮಾರ್, ಸಹಾಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವರ ಕಾಡಿನ ವಿಸ್ತೀರ್ಣ ಹತ್ತುವರೆ ಎಕ್ರೆ. ಸುಜ್ಲಾನ್ ಕಂಪನಿ ಈ ಭಾಗದಲ್ಲಿ ಕಂಪನಿ ನಿರ್ಮಿಸುವ ಸಂದರ್ಭ ಸ್ಥಳೀಯವಾಗಿ ನೂರಾರು ಎಕ್ರೆ ಜಾಗವನ್ನು ಪಡೆದಿತ್ತು, ಅದರಂತೆ ದೇವರಕಾಡು ಕೂಡಾ ನಮ್ಮ ಬೌಂಡರಿಯೋಳಗೆ ಇದೆ ಎಂಬುದಾಗಿ ಹೇಳುತ್ತಿದ್ದರಾದರೂ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಜನವಿರೋಧ ವಿದ್ದ ಕಾರಣ ಕಂಪನಿ ಹಿಂದೆ ಸರಿದಿತ್ತು. ಇದೀಗ ಜನರಿಗೆ ಯಾವುದೇ ಮಾಹಿತಿ ನೀಡದೆ ಒಳಭಾಗದಿಂದ ಮರಗಿಡಗಳನ್ನು ಕತ್ತರಿಸುತ್ತಾ, ಬೌಂಡರಿ ಭಾಗದಲ್ಲಿ ಮಾತ್ರ ಮರಗಳನ್ನು ಉಳಿಸಿದ್ದರಿಂದ ಕಂಪನಿಯ ಈ ಕಾರ್ಯಚರಣೆ ಜನರಿಗೆ ತಿಳಿಯುವಾಗ ಹತ್ತು ಎಕ್ರೆ ಪ್ರದೇಶ ಬಯಲು ಪ್ರದೇಶವಾಗಿ ರೂಪುಗೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಮಾಹಿತಿ ಕೇಳಿದರೆ ಕಂಪನಿಗೆ ಸೇರಿದ ಜಾಗವೆನ್ನುತ್ತಾರೆ. ಒಟ್ಟಾರೆಯಾಗಿ ಗ್ರಾಮದೇವರ ಧಾರ್ಮಿಕ ಪೂಜೆ ಪುನಸ್ಕಾರಗಳು ಪ್ರತೀ ವರ್ಷ ನಡೆಯುತ್ತಿದ್ದ ದೇವರ ಕಾಡು ಮಾಯವಾಗಿದ್ದು, ಇದೀಗ ಗ್ರಾಮಕ್ಕೆ ಏನು ಗಂಡಾಂತರ ಕಾದಿದಯೇ ಎಂಬ ಭೀತಿಯಲ್ಲಿ ಜನರು ಆತಂಕ ವ್ಯಕ್ತ ಪಡಿಸುತ್ತಾರೆ. ಅದೇ ವಯೋವೃದ್ಧರೋರ್ವರು ಹೇಳುವಂತೆ ನಂದಿಕೂರಮ್ಮನ ಧ್ವಜಸ್ತಂಭದ ಮುಂಭಾಗದಲ್ಲೇ ಅಧಿಕಾರಿಯೋರ್ವರು ಆರಂಭದ ದಿನದಲ್ಲಿ ನಾವು ಆ ದೇವರ ಕಾಡಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡೋಲ್ಲ ಎಂಬ ಭಾಷೆ ನೀಡಿದ್ದರೂ, ಇದೀಗ ಎಲ್ಲವನ್ನೂ ಮರೆತು ತಾಯಿಯ ಜುಟ್ಟು ಕತ್ತರಿಸುವ ಮೂಲಕ ಗ್ರಾಮಕ್ಕೆ ಬಹಳಷ್ಟು ದೊಡ್ಡ ಗಂಡಾಂತರ ತಂದೋಡ್ಡಿದ್ದಾರೆ ಎನ್ನುತ್ತಾರೆ.
ವಿಷಜಂತುಗಳ ಕಾಟ: ಕಾಡಿನಲ್ಲಿ ಆಶ್ರಯ ಪಡೆದಿದ್ದ ಕಾಡು ಪ್ರಾಣಿಗಳು ಸಹಿತ ವಿಷಜಂತುಗಳು ಇದೀಗ ನಿಲ್ಲಲು ನೆಲೆ ಇಲ್ಲದೆ, ಸುತ್ತಲ ಸಿಕ್ಕಸಿಕ್ಕ ಮನೆಯೋಳಗೆ ದಾಳಿ ಮಾಡುತ್ತಿದ್ದು ಕನರು ಆತಂಕ ಪಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಜನ ಮನೆಯ ಬಾಗಿಲು ಮುಚ್ಚಿ ಗೃಹ ಬಂಧನ ಅನುಭವಿಸುವಂತ್ತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಅನಿರ್ವಾಯ ಸ್ಥಿತಿಯಲ್ಲಿ ದೇವಿಯ ಮುಂದೆ ಸಾಮೂಹಿಕ ಪ್ರಾರ್ಥನೆ ನಡೆಸಲು ತಯಾರಿ ನಡೆಸುತ್ತಿದ್ದು. ಈ ಪ್ರಾರ್ಥನೆಯ ಫಲವಾಗಿ ತಪ್ಪಿತಸ್ಥರಿಗೆ ತಕ್ಕ ಶಾಸ್ತಿಯಾಗಲಿದೆ ಎನ್ನುತ್ತಾರೆ ವೃದ್ಧ ಬ್ರಾಹ್ಮಣರೋರ್ವರು.

ಪೈಲ್-ನಂದಿಕೂರು
ವರದಿ-ಸುರೇಶ್ ಎರ್ಮಾಳ್

Related posts

Leave a Reply