Header Ads
Header Ads
Breaking News

ನಂದಿನಿ ಸಿಹಿ ಉತ್ಸವ ಆಚರಣೆ .ಉಡುಪಿಯಲ್ಲಿ ಸಿಹಿ ಉತ್ಸವಕ್ಕೆ ಚಾಲನೆ.

ಕರ್ನಾಟಕ ಹಾಲು ಮಹಾ ಮಂಡಳಿಯು ರಾಜ್ಯದಾದ್ಯಂತ ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಗ್ರಾಹಕ ಸ್ನೇಹಿ ಯೋಜನೆ ರೂಪಿಸಿದ್ದು ಜುಲೈ 6ರಿಂದ 20ರವರೆಗೆ ನಂದಿನಿ ಸಿಹಿ ಉತ್ಸವ ಯೋಜನೆಯ ಮೊಲಕ ಗ್ರಾಹಕರಿಗೆ10 ಶೇಕಡಾ ರಿಯಾಯಿತಿ ದರದಲ್ಲಿ ನಂದಿನಿಯ ಸಿಹಿ ಉತ್ಪನ್ನ ಲಭ್ಯವಾಗಲಿದೆ.ಇಂದು ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅದ್ಯಕ್ಷ ರವಿರಾಜ್ ಹೆಗ್ಡೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ರಿಯಾಯಿತಿ ದರದಲ್ಲಿ ನಂದಿನಿಯ ಸಿಹಿ ಉತ್ಪನ್ನಗಳನ್ನು ವಿತರಿಸಿದರು. ನಂದಿನಿಯ ಸಿಹಿ ಉತ್ಪನ್ನಗಳಿಗೆ ಉತ್ತೇಜನ ಜೊತೆಗೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಿಹಿ ಉತ್ಪನ್ನಗಳು ಸಿಗಬೇಕು ಎಂಬ ಕಾರಣಕ್ಕೆ ಈ ಸಿಹಿ ಉತ್ಸವ ಆಚರಣೆ ನಡೆಯುತ್ತಿದೆ ಅಂತ ಮಾಹಿತಿ ನೀಡಿದರು. ಬಳಿಕ ಉಡುಪಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ ನಡೆಯಿತು. ಸಮಾರಂಭದಲ್ಲಿ ಒಕ್ಕೂಟದ ಅದ್ಯಕ್ಷ ರವಿರಾಜ್ ಹೆಗ್ಡೆ ನಂದಿನಿಯ ಉತ್ಪನ್ನಗಳು, ಹಾಗೂ ಈಗಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ, ಉದಯ್ ಕೋಟ್ಯಾನ್, ನವೀನ್ ಚಂದ್ರ ಜೈನ್, ಅಶೋಕ್ ಕುಮಾರ್ ಶೆಟ್ಟಿ, ಜಾನಕಿ ಹಂದೆ, ಸೂರ್ಯ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಬಿ.ವಿ ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply