Header Ads
Breaking News

ನಂಬರ್ 1 ಲವ್ ಸ್ಟೇಟಸ್ ಅಲ್ಲ ಕಿರುಚಿತ್ರ ಬಿಡುಗಡೆ

 ಬೆಸೆಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕಿರಣ್ ನಾಯಕ್ ದಂಬೇಲ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ’ನಂಬರ್ 1 ಲವ್ ಸ್ಟೇಟಸ್ ಅಲ್ಲ’ ಎನ್ನುವ 12 ನಿಮಿಷಗಳ ಕಿರುಚಿತ್ರದ ಬಿಡುಗಡೆಯ ಕಾರ್ಯಕ್ರಮವು ನಗರದ ಬೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ವಿಮೇನ್ಸ್ ನ್ಯಾಷನಲ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಆನಂತರ ’ನಂಬರ್ 1 ಲವ್ ಸ್ಟೇಟಸ್ ಅಲ್ಲ’ ಎನ್ನುವ ಕಿರುಚಿತ್ರಕ್ಕೆ ಚಾಲನೆ ನೀಡಿದರು.

  

ನಂತರ ಮಾತನಾಡಿದ ಅವರು, ಕಲಿಕೆಯಲ್ಲಿ ತೋರುವ ಆಸಕ್ತಿ ಹಾಗೂ ಸಾಧಿಸುವ ಛಲವನ್ನು ಪಠ್ಯೇತರ ಚಟುವಟಿಕೆಗಳಲ್ಲೂ ತೋರಿದಲ್ಲಿ ಶಾಲಾ ಜೀವನದಲ್ಲಿಯೇ ಹಲವಾರು ಸಾಧನೆಯನ್ನು ಮಾಡಬಹುದು. ವಿದ್ಯಾರ್ಥಿಗಳು ಆಸಕ್ತಿ ತೋರಿದಾಗ ಶಿಕ್ಷಣ ಸಂಸ್ಥೆಗಳು ಅವರ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸುತ್ತವೆ ಆಗ ವಿದ್ಯಾರ್ಥಿಯು ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ. ಎಂದರು. 

 

ಇದೇ ವೇಳೆ ಮಾತನಾಡಿದ ಕಿರುಚಿತ್ರದ ನಿರ್ದೇಶಕ ಕಿರಣ್ ನಾಯಕ್ ತನ್ನ ಬಹು ದಿನದ ಕನಸು ಹಾಗೂ ಶ್ರಮ ಇಂದು ಫಲಕೊಟ್ಟಿತ್ತು. ರಜೆಯಲ್ಲಿ ಬಿಸ್ಲೆರಿ ಬಾಟ್ಲಿಗಳನ್ನು ಪೂರೈಕೆ ಮಾಡುವ ಕೆಲಸ ಮಾಡಿ ಚಿತ್ರದ ನಿರ್ಮಾಣಕ್ಕಾಗಿ ಹಣ ಹೊಂದಿಸಿದ್ದೇನೆ. ಈ ಶಾಲೆಯಿಂದ ತನ್ನ ಈ ಪ್ರಯತ್ನಕ್ಕೆ ಬಹಳ ಪ್ರೋತ್ಸಾಹ ಸಿಕ್ಕಿದ್ದು ಇದಕ್ಕಿ ಚಿರಾರುಣಿಯಾಗಿದ್ದೇನೆ ಎಂದರು. ಕಿರುಚಿತ್ರದ ನಾಯಕಿ ವೈಷ್ಣವಿ, ನಾಯಕ ರೋಯ್ಸ್ಟನ್ ಹಾಗೂ ಸಿನಿಮಾ ತಂಡದ ಪ್ರಮುಖರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ವೇದಿಕೆಯಲ್ಲಿದ್ದ ಹಾಗೂ ಹಿರಿಯ ಶಿಕ್ಷಕಿಯವರಾದ ಶ್ರೀಮತಿ ಚಂದ್ರಿಕಾ ಕೆ.ಎ., ಲಲಿತಾ ಜೆ. ಮಲ್ಯ, ದೇವನ, ಕಾರ್ಯದರ್ಶಿ ದೇವಾನಂದ ಪೈ, ವಿಮೆನ್ಸ ನ್ಯಾಷನಲ್ ಎಜ್ಯಕೇಶನಲ್ ಸೊಸೈಟಿಯ ಉಪಾಧ್ಯಕ್ಷರು ಮಣೇಲ್ ಅಣ್ಣಪ್ಪ ನಾಯಕ್, ಗಣಿತ ಶಿಕ್ಷಕ ನೊಬರ್ಟ್ ಮಿರಾಂಡಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply