
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಆಶ್ರಯದಲ್ಲಿ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ಶಿಬಿರ ಬುಧವಾರ ಮುತ್ತೂರು ಸಮೀಪದ ಕೊಳವೂರಿನ ಪ್ರತಿಭಾ ಹೆಗ್ಡೆಯವರ ಮನೆ ವಠಾರದಲ್ಲಿ ನಡೆಯಿತು. ಮಂಗಳೂರಿನ ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ಪ್ರಬಂಧಕ ರಾಘವ ಯಜಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಅಭಿವೃದ್ದಿಯ ಪ್ರತಿನಿಧಿಗಳು, ಸರಕಾರ ಯೋಜನೆಗಳನ್ನು ಜಾರಿಗೆ ತಂದಾಗ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಜನರು ಪ್ರಯೋಜನ ಪಡೆಯುವಂತೆ ಪ್ರಯತ್ನಿಸ ಬೇಕು ಎಂದರು.
ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಕೌನ್ಸಿಲರ್ ಸತೀಶ್ ಅತ್ತಾವರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೂಪೇ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕೊಳವೂರು ಗುತ್ತಿನ ಸುಮಶಂಕರ್ ಶೆಟ್ಟಿ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಶೆಟ್ಟಿ, ಪ್ರಗತಿಪರ ಕೃಷಿಕ ದಯಾನಂದ ಶೆಟ್ಟಿ ಕೊಳವೂರುಗುತ್ತು, ವಿಜಯಬ್ಯಾಮಕ್ ಪ್ರಬಂಧಕ ಗೌರವ್ ಶರ್ಮಾ, ಕೊಳವೂರು ಹಾಲು ಉತ್ಪಾದಕರ ಮಹಿಳಾ ಸಂಘದ ಕಸ್ತೂರಿ, ಉಮಾ ಡಿ.ಶೆಟ್ಟಿ, ಮತ್ತಿತರು ಉಪಸ್ಥತರಿದ್ದರು.