Header Ads
Header Ads
Breaking News

ನಗರಗಳ ಅಭಿವೃದ್ಧಿಗೆಗೆ ಕೆಂಪೇಗೌಡರು ಪ್ರೇರಣೆಯಾಗಲಿ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿಕೆ

ಯಾವುದೇ ಗ್ರಾಮ ಆಥವಾ ನಗರಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕಾದರೆ ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಸಂದರ್ಭದಲ್ಲಿ ತೆಗೆದುಕೊಂಡ ಮುಂದಾಲೋಚನೆ ಕ್ರಮಗಳು ಹಾಗೂ ಅವರ ದೂರ ದೃಷ್ಠಿತ್ವ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ , ಯು.ಕಮಲಬಾಯಿ ಪ್ರೌಡಶಾಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಕೆಂಪೇಗೌಡರು ಚಿಕ್ಕವರಾಗಿದ್ದಾಗ ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಕಂಡು ಅದೇ ರೀತಿಯ ನಗರ ನಿರ್ಮಾಣದ ಕನಸು ಕಂಡಿದ್ದು, ಅದೇ ರೀತಿಯಲ್ಲಿ ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿದ್ದರು, ಇಂದಿನ ಆಧುನಿಕ ನಗರಗಳ ನಿರ್ಮಾತೃರು ಈ ರೀತಿಯ ಮುಂದಾಲೋಚನೆ ವಹಿಸಬೇಕು, ಕೆಂಪೇಗೌಡರ ದೂರ ದೃಷ್ಠಿತ್ವ ಅವರಿಗೆ ಪ್ರೇರಣೆಯಾಗಬೇಕು, ಕೆಂಪೇಗೌಡರ ನಿರ್ಮಾಣದ ಬೆಂಗಳೂರು ಈಗ ಉದ್ಯಾನ ನಗರಿ, ಐಟಿ ಬಿಟಿ ನಗರವಾಗಿ ವಿಶ್ವಮಾನ್ಯವಾಗಿದೆ, ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಿದ ಮಹನೀಯರನ್ನು ನೆನಯಲು ಅವರ ಜನ್ಮ ಜಯಂತಿ ಆಚರಣೆಗಳು ನಡೆಯಬೇಕು ಎಂದು ದಿನಕರ ಬಾಬು ಹೇಳಿದರು.ಜಿ.ಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಡಿವೈಎಸ್ಪಿ ಜೈ ಶಂಕರ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಡಾ.ಎಚ್.ಶಾಂತಾ ರಾಮ್, ಯು.ಕಮಲಬಾಯಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಮೂರ್ತಿ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply