Header Ads
Header Ads
Breaking News

ನಗರದ ಯಕ್ಷ ಪ್ರೀಯರ ಅವಕಾಶ ಕಿತ್ತುಕೊಂಡ ಪುರಭವನ ನೀತಿ

ಮಂಗಳೂರು: ಯಕ್ಷಗಾನದ ಇತಿಹಾಸದಲ್ಲೇ ಬಲು ಅಪರೋಪ ಎನಿಸುವಂತಹ ಕಾರ್ಯಕ್ರಮ ಮೇ.೨೮ರಂದು ನಡೆಯಲಿದೆ. ಆದರೆ ಇದು ನಡೆಯುತ್ತಿಲಿರುವುದು ನಗರ ಹೊರ ವಲಯದ ಕಣ್ಣೂರಿನಲ್ಲಿ ಬೆಳಗಿನ ೯ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ನಿರಂತರ ಕಾರ್ಯಕ್ರಮದ ಸವಿಯನ್ನು ಉಣ್ಣಲು ಯಕ್ಷಗಾನ ಪ್ರೀಯರೆಲ್ಲರೂ ಕಾತರರಾಗಿದ್ದಾರೆ. ಊರ ಹೊರಗೆ ಮಾಡುವುದಕ್ಕಿಂತ ನಗರ ಮಧ್ಯದಲ್ಲಿಯೇ ಆಯೋಜಿಸಬಹುದಿತ್ತಲ್ಲ ಎಂಬ ಆಗ್ರಹವೂ ಇದೇ ಸಂದರ್ಭದಲ್ಲಿ ಕೇಳಿ ಬಂದಿದೆ.
ಯಕ್ಷ ದ್ರುವ ಪಟ್ಲ ಫೌಂಡೌಶನ್ ನೆತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿಯೇ ಆಯೋಜಿಸಲು ಆರಂಭದಲ್ಲಿ ಯೋಚಿಸಲಾಗಿತ್ತು ಆದರೆ ಪುರಭವನ ಬಾಡಿಗೆಗೆ ನೀಡುವ ಮಂಗಳೂರು ಮಹಾನಗರ ಪಾಲಿಕೆಯ ತಪ್ಪು ನೀತಿಯ ಕಾರಣದಿಂದಾಗಿ ಈ ಕಾರ್ಯಕ್ರಮ ಕಣ್ಣೂರಿನಲ್ಲಿ ಆಯೋಜಿಸುವಂತಾಯಿತು ಎಂದು ಕಾರ್ಯಕ್ರಮದ ರೂವಾರಿ ಪಟ್ಲ ಸತೀಶ್ ಶೆಟ್ಟರು ಬೇಸರ ವ್ಯಕ್ತಪಡಿಸಿದ್ದಾರೆ.
ದೊಡ್ಡ ಪ್ರಮಾಣದ ಕಾರ್ಯಕ್ರಮವೊಂದನ್ನು ರೂಪಿಸಲು ಮೂರುನಾಲ್ಕು ತಿಂಗಳ ಸಿದ್ದತೆಯಾದರೂ ಬೇಕಾಗುತ್ತದೆ. ಆದರೆ ಮನಪಾ ಆಡಳಿತಗಾರರು ಎರಡು ತಿಂಗಳಿಗಿಂತ ಮೊದಲು ಪುರಭವನವನ್ನು ಬುಕ್ ಮಾಡಲು ಅವಕಾಶ ನೀಡುತ್ತಿಲ್ಲ. ಎಲ್ಲಿ ಕಾರ್ಯಕ್ರಮ ಎಂದು ನಿರ್ದಿಷ್ಟ ಪಡಿಸದೇ ಯೋಜನೆ ಮುಂದುವರಿಸಲು ಸಾಧ್ಯವಾಗುವುದೇ ಇಲ್ಲ. ಪುರಭವನ ಕನಿಷ್ಠ ಮೂರು ತಿಂಗಳ ಮೊದಲಾದರೂ ಬುಕ್ ಮಾಡಲು ಅವಕಾಶ ಆಗುವಂತಾಗಿದ್ದರೆ ಉತ್ತಮ ಕಾರ್ಯಕ್ರಮದ ಸವಿಯನ್ನು ಮಂಗಳೂರಿನ ಹೆಚ್ಚು ಹೆಚ್ಚು ನಾಗರಿಕರು ಸವಿಯಬಹುದಾಗಿತ್ತು. ಆದರಿದು ಸಾಧ್ಯವಾಗದಿದ್ದುದು ಮಂಗಳೂರು ಮಹಾನಗರ ಪಾಲಿಕೆಯ ತಪ್ಪು ನೀತಿಯ ಕಾರಣದಿಂದಾಗಿ ಎನ್ನದೆ ಬೇರೆ ದಾರಿ ಇಲ್ಲ ಎಂದೆನಿಸುತ್ತದೆ.
ಮದುವೆ ಕಾರ್ಯಕ್ರಮಕ್ಕಾದರೆ ಆರು ತಿಂಗಳ ಮೊದಲೇ ಪುರಭವನ ಬುಕ್ ಮಾಡಬಹುದಾಗಿದ್ದರೆ, ಮನೋರಂಜನೆಯ ಕಾರ್ಯಕ್ರಮಕ್ಕೇಕೆ ಈ ಅವಕಾಶ ಇಲ್ಲ ಎಂಬುದು ಕಲಾವಿದರು ಮತ್ತು ಕಲಾ ಪ್ರೇಮಿಗಳ ಪ್ರಶ್ನೆ. ಈ ಹಿಂದೆ ಮೂರು ತಿಂಗಳ ಮೊದಲು ಬುಕ್ ಮಾಡುವ ಅವಕಾಶ ಇತ್ತು. ಪುರಭವನ ನವೀಕರಿಸಿದ ಬಳಿಕ ಈ ಅವಸ್ಥೆ. ನವೀಕರಣದ ಬಳಿಕ ಎರಡು ಕಾರಣಗಳಿಗಾಗಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಒಂದು ಬುಕ್ ಮಾಡಲು ನಿಗದಿಗೊಳಿಸಿದ ಕಡಿಮೆ ಸಮಯ. ಮತ್ತೊಂದು ಏರಿಸಿರುವ ಬಾಡಿಗೆ. ಫ್ರೀ ಶೋ ಮಾಡುವವರು ಏರಿಸಿರುವ ಬಾಡಿಗೆಯನ್ನು ಹೇಗಾದರೂ ನಿಭಾಯಿಸಿಕೊಳ್ಳಬಹುದು. ಆದರೆ ಟಿಕೆಟ್ ಕಾರ್ಯಕ್ರಮ ಮಾಡುವವರಿಗೆ ಸಾಧ್ಯವೇ ಇಲ್ಲದ ಪರಿಸ್ಥಿತಿಯನ್ನು ಕಳೆದ ಒಂದೂವರೆ ವರ್ಷದಲ್ಲಿ ನಾವು ಕಂಡಿದ್ದೇವೆ. ಟಿಕೆಟ್ ಮೂಲಕ ನಡೆಯುವ ನಾಟಕ, ಯಕ್ಷಗಾನ, ಜಾದೂ ಮತ್ತಿತರ ಮನೋರಂಜನೆಯ ಕಾರ್ಯಕ್ರಮಗಳು ಇಲ್ಲದೆ ವರ್ಷ ಊರುಳಿದೆ. ಕಡಿಮೆ ಬಾಡಿಗೆ ಬೇಕಿದ್ದರೆ ಪಕ್ಕದ ಸಭಾಭವನ ಬಳಸಿಕೊಳ್ಳಿ ಎನ್ನುತ್ತಾರೆ. ಭೋಜನೆ ಶಾಲೆಯಲ್ಲಿ ಟಿಕೆಟ್ ಕಾರ್ಯಕ್ರಮ ಮಾಡಲು ಸಾಧ್ಯವೆ? ಭೋಜನೆ ಶಾಲೆಯನ್ನೇ ಸಭಾಂಗಣ ಎಂದು ಹೇಳಿ ಅದನ್ನು ಬಳಸಲು ಸಲಹೆ ನೀಡಿದವರು ಹಿಂದಿನ ಮೇಯರ್ ಹರಿನಾಥರು. ದುರದೃಷ್ಟ ಎಂದರೆ ಅವರೂ ಒಬ್ಬ ಕಲಾವಿದರಾಗಿದ್ದವರು.
ಪುರಭವನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ವಿಷಯದಲ್ಲಿ ಕಲಾವಿದರೊಂದಿಗೆ ಸಮಾಲೋಚಿಸುತ್ತೇವೆ ಎಂದು ಮನಪಾ ಡಾಳಿತಗಾರರು ಕಳೆದ ಒಂದು ವರ್ಷದಿಂದ ಹೇಳುತ್ತ ಬಂದಿದ್ದಾರೆ. ಆದರೆ ಸಮಾಲೋಚನೆ ಸಭೆ ನಡೆಯುವ ಲಕ್ಷಣ ಮಾತ್ರ ಕಾಣುತ್ತಲೇ ಇಲ್ಲ.
ಹಿರಿಯ ಕಲಾವಿದರು ಅವಕಾಶ ಸಿಕ್ಕಾಗೆಲ್ಲ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಮನಪಾ ಆಡಳಿತಗಾರರಿಗೆ ಕಲಾವಿದರ ಆಕ್ರೋಶದ ಧ್ವನಿ ಕೇಳುತ್ತಲೇ ಇಲ್ಲ. ಅವರು ಯೋಚಿಸುತ್ತಿರುವುದು ಕೇವಲ ವ್ಯವಹಾರದ ಲೆಕ್ಕಾಚಾರಗಳನ್ನು ಮಾತ್ರ. ನವೀಕರಣಕ್ಕೆ ನಾಲ್ಕು ಕೋಟಿ ರೂ. ಖರ್ಚು ಮಾಡಿದ್ದನ್ನು ಹಿಂಪಡೆಯುವುದು ಹೇಗೆ ಎಂಬ ಲೆಕ್ಕಾಚಾರದ ಬಾಡಿಗೆ ನಿಗದಿ ಪಡಿಸಿದ್ದಾರೆ. ಹಾಗಾದರೆ ಖಾಸಗಿ ಸಂಸ್ಥೆಗಳಿಗೂ ಜನರ ಸೇವೆಗಾಗಿ ಇರುವ ಮನಪಾ ಆಡಳಿತಕ್ಕೆ ಇರುವ ವ್ಯತ್ಯಾಸವಾದರೂ ಏನು?
ಪುರಭವನ ನಿರ್ಮಾಣದ ಮೂಲ ಉದ್ದೇಶವನ್ನೇ ಮನಪಾ ಆಡಳಿತಗಾರರು ಮರೆತು ಬಿಟ್ಟಿದ್ದಾರೆ. ಇದರಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಜನಸಾಮಾನ್ಯರಿಗೆ ಮರಿಚಿಕೆ ಎಂಬಂತಾಗಿ ಬಿಟ್ಟಿದೆ.

Related posts

Leave a Reply