Header Ads
Header Ads
Breaking News

ನಗರದ ಹಲವೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.ನಗರದ ಕೊಟ್ಟಾರ ಬಳಿಯಲ್ಲಿ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯವು ಪಾಲಿಕೆ ಕಮೀಷನರ್ ಮಹಮ್ಮದ್ ನರೀಝ್ ನೇತೃತ್ವದ ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನಡೆಸಲಾಯ್ತು.
 

ಮಂಗಳೂರಲ್ಲಿ ವಾರದ ಹಿಂದೆ ಸುರಿದ ಭಾರಿಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಕೊಟ್ಟಾರ ಚೌಕಿ , ಅಳಕೆ, ಪಂಪವೆಲ್ ಜಪ್ಪಿನ ಮೊಗರು ಮುಂತಾದ ಪ್ರದೇಶಗಳು ನೀರಿನಿಂದ ಮುಳುಗಿದ್ದವು ನಗರದಲ್ಲಿ ಕೃತಕ ನೆರೆ ಉಂಟಾಗಲು ರಾಜ ಕಾಲುವೆ ಒತ್ತುವರಿ ಮಾಡಿ ಕಾರಣ ಎಂಬುವುದು ಜಿಲ್ಲಾಧಿಕಾರಿ ಅವರ ಗಮನಕ್ಕೆ ಬಂದಿತ್ತು. ಒತ್ತುವರಿ ಪತ್ತೆ ಹಚ್ಚಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀ ಕಾಂತ ರಾವ್ ನೇತೃತ್ವದ ತಂಡ ರಚಿಸಲಾಗಿತ್ತು .ಶನಿವಾರ ಮುಡಾ ಆಯುಕ್ತರು ಒತ್ತುವರಿ ಆಗಿರುವ ಕುರಿತು ವರದಿ ಸಲ್ಲಿಸಿದ್ರು. ಹೀಗಾಗಿ ಇಂದಿನಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಆಯುಕ್ತ ನಜೀರ್ ಅವರ ನೇತೃತ್ವದಲ್ಲಿ ಆರಂಭಿಸಲಾಗಿದೆ .ಈ ವಾರ ನಗರದ ವಿವಿಧೆ ಒತ್ತುವರಿ ಕಾರ್ಯಾಚರಣೆ ಮುಂದುವರಿಯಲಿದೆ.

Related posts

Leave a Reply