Header Ads
Header Ads
Breaking News

ನಗರಸಭಾ ಚುನಾವಣೆಯಲ್ಲಿ ಹೀನಾಯ ಸೋಲು. ಶಕುಂತಳಾ ಶೆಟ್ಟಿ ಉಚ್ಚಾಟನೆ’ ಕಾವು ಹೇಮನಾಥ ಶೆಟ್ಟಿ ಆಗ್ರಹ.

ಪುತ್ತೂರು; ಪುತ್ತೂರು ನಗರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ಸೋಲು ಕಾಣಲು ಕಾರಣವಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಕಾಂಗ್ರೇಸ್ ಬ್ಲಾಕ್ ಸಮಿತಿಯ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.ಪುತ್ತೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಪುತ್ತೂರು ನಗರಸಭೆಯಲ್ಲಿ ಕಾಂಗ್ರೇಸ್ ಪಕ್ಷ ಕೇವಲ ೫ ಸ್ಥಾನಗಳನ್ನು ಮಾತ್ರ ಪಡೆದು ಸೋಲು ಅನುಭವಿಸಿದೆ. ಇದಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ದುರಂಹಕಾರ ಮತ್ತು ಸರ್ವಾಧಿಕಾರಿ ಧೋರಣೆಯೇ ಕಾರಣವಾಗಿದೆ. ಅವರು ಶಾಸಕರಾದ ನಂತರ ಪುತ್ತೂರು ಕಾಂಗ್ರೇಸ್ ಪಕ್ಷವನ್ನು ಅಸ್ತವ್ಯಸ್ತಗೊಳಿಸಿ ಸಂಪೂರ್ಣ ನಾಶ ಮಾಡಿದ್ದಾರೆ ಎಂದವರು ಆರೋಪಿಸಿದರು.ನಗರಸಭೆಯಲ್ಲಿ ಹಾಲಿ ಸದಸ್ಯರಿಗೆ ಅವಕಾಶ ನಿರಾಕರಣೆ ಮಾಡಿದ ಶಕುಂತಳಾ ಶೆಟ್ಟಿ ಗೆಲ್ಲುವ ಅಭ್ಯರ್ಥಿಗಳ ಬದಲಿಗೆ ಯಾರ್‍ಯಾರಿಗೋ ಸೀಟು ನೀಡಿದ ಪರಿಣಾಮ ಈ ರೀತಿಯ ಹೀನಾಯ ಸೋಲು ಉಂಟಾಗಿದೆ. ನಗರಸಭೆಯ ಹಾಲಿ ಸದಸ್ಯರಿಗೆ ಮಾಡಿದ ಅನ್ಯಾಯದ ಪ್ರತಿಫಲವೇ ಇಂದಿನ ಫಲಿತಾಂಶವಾಗಿದೆ. ಪಕ್ಷವನ್ನು ಸರ್ವನಾಶ ಮಾಡಿದ ಅವರು ಇನ್ನೂ ಪಕ್ಷದಲ್ಲಿ ಉಳಿದರೆ ಕಾಂಗ್ರೇಸ್ ಗೆ ಪುತ್ತೂರಿನಲ್ಲಿ ಯಾವುದೇ ಭವಿಷ್ಯ ಇಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ನಗರಸಭಾ ಮಾಜಿ ವಿಪಕ್ಷ ನಾಯಕ ಎಚ್,ಮಹಮ್ಮದ್ ಆಲಿ, ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯ ಅನ್ವರ್ ಖಾಸಿಂ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply