Header Ads
Header Ads
Breaking News

ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ – ಕೋಟ ಶ್ರೀನಿವಾಸ ಪೂಜಾರಿ

ಪುತ್ತೂರು: ನಗರಸಭೆ ಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಲಿದೆ. ಮತದಾರರೆ ಅಭಿಪ್ರಾಯದಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪಾರದರ್ಶಕ ಆಡಳಿತ ನೀಡುವ ಮೂಲಕ ನಗರಸಭೆ ಹಿಂದಿನ ಆಡಳಿತಕ್ಕಿಂತ ಉತ್ತಮ ರೀತಿಯಲ್ಲಿ ಅಗತ್ಯ ಸಮಸ್ಯೆಯಾಗಿದ್ದ ಕಡತವನ್ನು ವಿಲೇವಾರಿ ಮಾಡುವ ಮೂಲಕ ಜನರ ವಿಶ್ವಾಸ ಪಡೆಯಲಿದೆ. ಈ ಹಿಂದೆ ರಾಜ್ಯ ಆಡಳಿತ ಸರಕಾರ, ಜಿಲ್ಲಾಡಳಿತ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆಗೆ ನಿರಾಶಕ್ತಿ ವಹಿಸಿದ್ದರಿಂದ ಎನೆಲ್ಲಾ ಅನಾಹುತ ನಗರಸಭೆಯಲ್ಲಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಸಾಮಾನ್ಯ ಪ್ರಜೆಗೂ ಸಕಾಲದಲ್ಲಿ ಅರ್ಜಿ ಸ್ವೀಕಾರ ಮಾಡುವ ವ್ಯವಸ್ಥೆಗೆ ಇನ್ನೂ ಮುತುವರ್ಜಿ ವಹಿಸದೆ ಸಕಾಲ ಸಂಪೂರ್ಣ ಸತ್ತು ಹೋಗಿದೆ. ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದರೆ ಪುತ್ತೂರಿನಲ್ಲಿ ಇ ಆಡಳಿತ / ಸಕಾಲ ಜಾರಿಗೆ ತರುವ ಜವಾಬ್ದಾರಿಯುತ ಕೆಲಸ ಮಾಡಲಿದ್ದೇವೆ ಎಂದು ಹೇಳಿದ ಅವರು ೩೧ಕ್ಕೆ ೩೧ ಬಿಜೆಪಿ ಅಭ್ಯರ್ಥಿಗಳು ನಗರಸಭೆ ಚುನಾವಣೆಯಲ್ಲಿ ಬಹುಮತ ಗಳಿಸಲಿದ್ದಾರೆ.

ಬಾಲವನ, ಬೀರುಮಲೆ ಬೆಟ್ಟ ಅಭಿವೃದ್ಧಿ:
ಡಾ. ಶಿವರಾಮ ಕಾರಂತರ ಬಾಲವನವನ್ನು ಆಧುನಿಕರಣಗೊಳಿಸಿ, ಅರ್ಥಪೂರ್ಣವಾಗಿ ಅಭಿವೃದ್ಧಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಲಿದೆ. ಬೀರಮಲೆ ಬೆಟ್ಟವನ್ನೂ ಪ್ರವಾಸೋದ್ಯಮವನ್ನಾಗಿಸುವ ನಿಟ್ಟಿನಲ್ಲಿ ಉತ್ತಮ ಅಭಿವೃದ್ಧಿ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಒಳಜಗಳದಿಂದ ಬಡವನಿಗೆ ಮನೆಯಿಲ್ಲ:
ಪುತ್ತೂರೂ ಈ ಹಿಂದಿನ ಶಾಸಕರು ಮತ್ತು ಪಕ್ಷದ ಆಂತರಿಕ ಒಳಜಗಳದಿಂದಾಗಿ ಪುತ್ತೂರು ನಗರ ಪ್ರದೇಶದಲ್ಲಿ ಒಬ್ಬನೇ ಒಬ್ಬ ಬಡವನಿಗೆ ಮನೆ ಕೊಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ವಿಶೇಷ ಪ್ಲಾಟ್ ವ್ಯವಸ್ಥೆ ಮಾಡುವ ಭರವಸೆ ನೀಡಿದೆ. ಆದರೆ ಪುತ್ತೂರಿಗೆ ಆ ವ್ಯವಸ್ಥೆಯೂ ಸಿಗದಂತಾಗಿದೆ. ಇದರಿಂದಾಗಿ ಪುತ್ತೂರು ನಗರಸಭೆ ಸಂಪೂರ್ಣ ಕುಲಗೆಟ್ಟುಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮುಖ್ಯಮಂತ್ರಿಯಿಂದ ದಿನಕ್ಕೊಂದು ಮಾತು:
ನುಡಿದಂತೆ ನಡೆಯಬೇಕಾಗಿದ್ದ ಸರಕಾರ ದಿನಕ್ಕೊಂದು ಮಾತು ಹೇಳುವ ಮೂಲಕ ಕಾಲ ಕಳೆಯುತ್ತಿದೆ. ಸಾಲ ಮನ್ನಾ ಮಾಡುವ ಸರಕಾರದ ವಿಚಾರದಲ್ಲಿ ಸರಕಾರ ದಿನಕ್ಕೊಂದು ಹೇಳಿಕೆ ನೀಡಿ ಆದೇಶ ನೀಡದೆ ರೈತರನ್ನು ನಿರ್ಲಕ್ಷಿಸುತ್ತಿದೆ. ಕೇಂದ್ರ ಸರಕಾರ ರೂ. 500 ಕೋಟಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿದರೂ. ರಾಜ್ಯ ಸರಕಾರ ಮುತುವರ್ಜಿ ವಹಿಸಿದೆ ಇದ್ದರಿಂದ ಇಲ್ಲಿನ ತನಕ ಶೇ.5 ಕಾಮಗಾರಿ ಆಗುತ್ತಿಲ್ಲ. ಕೊಡುಗು ಸಂತ್ರಸ್ತರಿಗೆ ಕೇವಲ 10 ದಿನಗಳಲ್ಲಿ ಮನೆ ಕಟ್ಟಿಕೊಡಲಾಗುವುದು ಎಂದು ಹೇಳಿಕೆ ನೀಡಿಯೇ 10 ದಿನ ಆಯಿತು. ಕೇವಲ ಹೇಳಿಕೆಯಲ್ಲೇ ರಾಜ್ಯ ಸರಕಾರ ಕಾಲ ಕಳೆಯುತ್ತಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್‍ಯಕಾರಿಣಿ ಸಮಿತಿ ಸದಸ್ಯ ಅಪ್ಪಯ್ಯ ಮಣಿಯಾಣಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಎಪಿಎಂಸಿ ಸದಸ್ಯ ದಿನೇಶ್ ಮೆದು, ನಗರಸಭೆ ಹಾಲಿ ಸದಸ್ಯ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

 

Related posts

Leave a Reply