Header Ads
Header Ads
Breaking News

ನಗರ ಸಂಚರಿಸುತ್ತಿರುವ ಡ್ರಗ್ಸ್ ಕಾರ್ಕೋಟಕ. ಜನರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ. ರಾಮಂಜಿಯಿಂದ ಅಷ್ಟಮಿಯ ವಿಶೇಷ ವೇಷ.

ಡ್ರಗ್ಸ್ ಕಾರ್ಕೋಟಕ ನಗರ ಸಂಚರಿಸುತ್ತಿದ್ದಾನೆ. ಈ ಮೂಲಕ ಜನರಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಹೌದು ಕಳೆದ ಆರು ಬಾರಿ ಅಷ್ಟಮಿಯಂದು ವೇಷ ಧರಿಸಿ ಬಡವರಿಗೆ, ಮಕ್ಕಳ ಆರೋಗ್ಯಕ್ಕೆ ನೆರವಾಗುತ್ತಿರುವ ರಾಮಂಜಿ ಈ ಬಾರಿಯೂ ಡ್ರಗ್ಸ್ ಕಾರ್ಕೋಟಕ ಎಂಬ ವೇಷ ಹಾಕಿದ್ದು ಈ ಮೂಲಕ ತನ್ನ ಮೂರು ಉದ್ದೆಶವನ್ನು ಮುಂದಿಟ್ಟು ಜನರ ಬಳಿಗೆ ಹೋಗುತ್ತಿದ್ದಾನೆ.

ಪೊಲೀಸ್ ಇಲಾಖೆ, ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಮಾದಕ ವ್ಯಸನ ಮಾಸಾಚರಣೆಗೆ ತನ್ನ ವೇಷದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇದಲ್ಲದೇ ಸರಕಾರಿ ಶಾಲೆಗೆ ಹಾಗೂ ಅನಾರೋಗ್ಯ ಪೀಡಿತೆ ವಿದ್ಯಾರ್ಥಿನಿಯೋರ್ವಳಿಗೆ ರಾಮಂಜಿ ತನ್ನ ವೆಷದ ಮೂಲಕ ಸಂಗ್ರಹವಾಗುವ ಹಣವನ್ನು ನೀಡಲಿದ್ದಾರೆ. ಜಿಲ್ಲಾ ಎಸ್ಪಿ ಲಕ್ಷಣ್ ನಿಂಬರಗಿ ರಾಮಂಜಿಯ ಡ್ರಗ್ಸ್ ಕಾರ್ಕೋಟಕ ಎಂಬ ವೇಷದ ಮೂಲಕದ ಜಾಗೃತಿಗೆ ಚಾಲನೆ ನಿಡಿದರು. ರಾಮಂಜಿ ಉಡುಪಿಯ ಹಲವೆಡೆ ಸಂಚರಿಸಿ ಜಾಗೃತಿ ಕಾರ್ಯ ಮೂಡಿಸುತ್ತಿದ್ದಾರೆ.

Related posts

Leave a Reply