Header Ads
Header Ads
Breaking News

ನಟ ಪ್ರಕಾಶ್ ರೈ ಗೆ ಬೆದರಿಕೆ ನನಗೆ ಇಲ್ಲಿ ಆತಂಕದ ವಾತಾವರಣ ಇದೆ ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರೈ ಹೇಳಿಕೆ

ನಟ ಪ್ರಕಾಶ್ ರೈಗೆ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ರಾತ್ರಿ ಮಂಗಳೂರಿನ ವಿಮಾನದ ನಿಲ್ದಾಣದಲ್ಲಿ ಜೀವ ಬೆದರಿಕೆ ಹೊಡ್ಡಲಾಗಿದೆ. ಪ್ರಕಾಶ್ ರೈ ಅವರ ಕಾರು ಡ್ರೈವರ್‌ಗೆ ನಾಲ್ಕು ಮಂದಿ ದುಷ್ಕರ್ಮಿಗಳು ಧಮ್ಕಿ ಹಾಕಿದ್ದಾರೆ. ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಪೊಲೀಸರು ಬಂದ ಕೂಡಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ಜೀವ ಬೆದರಿಕೆಯ ಬಗ್ಗೆ ಸ್ವತಃ ಪ್ರಕಾಶ್ ರೈ ಮಾಹಿತಿ ನೀಡಿದ್ದಾರೆ. ನನಗೆ ಇಲ್ಲಿ ಆತಂಕದ ವಾತಾವರಣ ಇದೆ ಎಂದು ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ. ಇನ್ನು ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ಸಾಕ್ಷಧಾರ ಇಲ್ಲ ಅಂತ ಹೇಳಿದೆ. ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ. ಕೋರ್ಟಿನ ತೀರ್ಪು ಜನಸಾಮಾನ್ಯರನ್ನು ಗೊಂದಲ ಮಾಡಿದೆ. ಕೋರ್ಟ್ ಕೊಟ್ಟಿರುವ ತೀರ್ಪು ನ್ಯಾಯನಾ ಎಂದು ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರೈ ಮಾತನಾಡಿದರು.

Related posts

Leave a Reply