Header Ads
Header Ads
Breaking News

ನಟ ಸುದೀಪ್ ಅಭಿಮಾನಿ ಮೇಲೆ ಹಲ್ಲೆ ಪ್ರಕರಣ : ನಾಲ್ವರ ಬಂಧನ, ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ

ನಟ ಸುದೀಪ್ ಅಭಿಮಾನಿ ಮೇಲೆ ವಿನಯ್ ಗುರೂಜಿ ಬೆಂಬಲಿಗರಿಂದ ಹಲ್ಲೆ ನಡೆಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಆರೋಪಿಗಳ ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ನಟ ಸುದೀಪ್ ಅಭಿಮಾನಿಯಾದ ರತ್ನಾಕರ್ ಪೂಜಾರಿ ಮೇಲೆ ವಿನಯ್ ಗುರೂಜಿ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು. ರತ್ನಾಕರ್ ಪೂಜಾರಿ ಅವರ ಕೈ ಕಾಲು ಮುರಿತವಾಗಿತ್ತು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿತ್ತು. ರತ್ನಾಕರ್ ಪೂಜಾರಿ ನಟ ಸುದೀಪ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುರಾಜ್, ಸಂತೋಷ್, ರವಿರಾಜ್, ಪ್ರದೀಪ್ ದಸ್ತಗಿರಿ ಮಾಡಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. 8 ರಿಂದ 10 ಆರೋಪಿಗಳು ಇದ್ದಾರೆಂದು ದೂರು ದಾರ ಹೇಳಿಕೆ ಕೊಟ್ಟಿದ್ದಾರೆ. ಪೆÇಲೀಸರು ತಂಡ ರಚನೆ ಮಾಡಿ ಹುಡುಕಾಟ ಮಾಡುತ್ತಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *