Header Ads
Header Ads
Breaking News

ನಡಿಕಂಬಳ ಗುತ್ತು ಮನೆಯಲ್ಲಿ ಶ್ರೀ ದೈವ ಕೊಡಮಣಿತ್ತಾಯ

ಬಂಟ್ವಾಳ: ಕುಪ್ಪೆಪದವು ಸಮೀಪದ ಇರುವೈಲು ದೊಡ್ಡಗುತ್ತು ಮನೆತನಕ್ಕೆ ಸಂಬಂಧಪಟ್ಟ ನಡಿಕಂಬಳ ಗುತ್ತು ಮನೆಯಲ್ಲಿ ಶ್ರೀ ದೈವ, ಕೊಡಮಣಿತ್ತಾಯ, ಮಹಿಸಂದಾಯ ಹಾಗೂ ಪಂಜುರ್ಲಿ, ಮರ್ಲ್ ಜುಮಾದಿ ದೈವಗಳ ಪ್ರತಿಷ್ಠೆ ಶನಿವಾರ ವಿಜ್ರಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೈವಗಳ ದರ್ಶನ ನಡೆದು ಗಂಧ ಪ್ರಸಾದ ವಿತರಿಸಲಾಯಿತು. ಅನ್ನದಾನದ ಬಳಿಕ ಸಂಜೆಯ ವೇಳೆ ಕಿಲೆಂಜಾರು ಅರಮನೆಯಿಂದ ರಾಜನ್‌ದೈವ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಏರುವ ದೃಶ್ಯ ಮನಮೋಹಕವಾಗಿತ್ತು. ಕಿಲೆಂಜಾರು ಅರಮನೆಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಪರ್ವ ನೀಡಿದ ಬಳಿಕ ಪಲ್ಲಕ್ಕಿಯ ಮೂಲಕ ದೈವದ ಭಂಡಾರವನ್ನು ನಡಿಕಂಬಳ ಗುತ್ತುವಿಗೆ ತರಲಾಯಿತು. ಬಳಿಕ ನಡಿಕಂಬಳ ಗುತ್ತುವಿನಲ್ಲಿ ದರ್ಶನ ಸೇವೆ ನಡೆದು ದೈವದ ಮನೆ ಪ್ರವೇಶ ನಡೆಯಿತು. ಈ ಸಂದರ್ಭ ಕಿಲೆಂಜಾರು ಅರಮನೆಯ ದಿನೇಶ್ ಬಲ್ಲಾಳ್, ದೊಡ್ಡಗುತ್ತು ಮನೆತನದ ಗಡಿಕಾರ ಜಗದೀಶ ಶೆಟ್ಟಿ ಯಾನೆ ಕೊರಗ ಶೆಟ್ಟಿ, ನಡಿಕಂಬಳ ಗುತ್ತು ಮನೆಯ ಮನೋಹರ ಶೆಟ್ಟಿ, ಉಳಿಪಾಡಿಗುತ್ತು ಚಂದ್ರಹಾಸ ಶೆಟ್ಟಿ, ಶಿವರಾಮ ಶೆಟ್ಟಿ, ಬೆಳ್ಳೂರು ಪರಾರಿ ಪ್ರದೀಪ್ ಶೆಟ್ಟಿ, ದೊಡ್ಡಗುತ್ತುವಿನ ದೇವರಾಜ ರೈ, ನಂದರಾಮ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಶರತ್‌ಕುಮಾರ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಶ್ರೇಯಸ್ ಶೆಟ್ಟಿ ಹಾಜರಿದ್ದರು. ರಾತ್ರಿಯ ವೇಳೆ ದೈವಗಳಿಗೆ ನೇಮೋತ್ಸವ ನಡೆಯಿತು.

Related posts

Leave a Reply