Header Ads
Header Ads
Breaking News

ನದಿಗೆ ಬಿದ್ದು ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಕುಂದಾಪುರ: ಶನಿವಾರ ಗಾಳ ಹಾಕುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದು ನೀರುಪಾಲಾಗಿದ್ದ ಯುವಕನೋರ್ವನ ಮೃತದೇಹ ಆದಿತ್ಯವಾರ ಬೆಳಗ್ಗೆ ಪತ್ತೆಯಾಗಿದೆ.

ಸಂತೋಷನಗರ ನಿವಾಸಿ ಅಮೀರ್ ಜಾನ್ ಎಂಬವರ ಪುತ್ರ ಮೊಹಮ್ಮದ್ ನಬಿ(26) ಸಾವನ್ನಪ್ಪಿದ ಯುವಕ ನಬಿ ಕೇಬಲ್ ಕೆಲಸ ಮಾಡುತ್ತಿದ್ದು ಶನಿವಾರ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಬಳಿಕ ಗಾಳ ಹಾಕಲು ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿಗೆ ತೆರಳಿದ್ದರು. ನಬಿ ನದಿಯಲ್ಲಿ ಗಾಳ ಹಾಕುತ್ತಿರುವ ವೇಳೆಯಲ್ಲಿ ಗಾಳ ನದಿ ದಡದಲ್ಲಿರುವ ಕಲ್ಲಿಗೆ ಸಿಲುಕಿದ್ದು, ಗಾಳ ಕೈಗೆ ಸುತ್ತಿಕೊಂಡು ತಪ್ಪಿಸಲು ಪ್ರಯತ್ನಿಸುತ್ತಿರುವ ವೇಳೆಯಲ್ಲಿ ಕಾಲು ಜಾರಿ ನದಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.

ಶನಿವಾರ ಸಂಜೆ ಇನ್ನೋರ್ವ ವ್ಯಕ್ತಿ ಮೀನು ಹಿಡಿಯಲು ಬಂದಾಗ ನದಿಯಲ್ಲಿ ಗಾಳ ಇರುವುದನ್ನು ಗಮನನಿದ್ದರು. ಬಳಿಕ ಬೈಕ್ ಸೇತುವೆಯ ಮೇಲ್ಬಾಗ ಇದ್ದುದನ್ನು ಗಮನಿಸಿದ ಅವರು ಸ್ಥಳೀಯರಿಗೆ ಮಾಹಿತಿ ನೀಡಿ ಹುಡುಕಾಟ ಆರಂಭಿಸಿದರು. ರಾತ್ರಿಯಾಗಿದ್ದರಿಂದ ಹುಡುಕಾಟ ನಡೆಸಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳಿಯರು ನದಿಯಲ್ಲಿ ಹುಡುಕಾಟ ನಡೆಸಿದಬಳಿಕ ಮೃತದೇಹ ಕನ್ನಡಕುದ್ರು ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ವರದಿ: ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ

Related posts

Leave a Reply