Header Ads
Header Ads
Breaking News

ನದಿಗೆ ಬಿದ್ದ ಬೊಲೆರೋ – ಮಹಿಳೆ ಮೃತ್ಯು: ಕಿನ್ನಿಗೋಳಿಯ ಸಂಕಲಕರಿಯದಲ್ಲಿ ಘಟನೆ

ಕಿನ್ನಿಗೋಳಿ ಸಮೀಪದ ಸಂಕಲಕರಿಯದಲ್ಲಿ ಬೊಲೆರೋ ಒಂದು ನದಿಗೆ ಬಿದ್ದ  ಪರಿಣಾಮ ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಮೃತ ಮಹಿಳೆಯನನ್ನು ಕಾರ್ಕಳ ತಾಲೂಕಿನ ಬೋಳ ನಿವಾಸಿ ಡಯಾನಾ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಬೊಲೆರೋ ವಾಹನದಲ್ಲಿದ್ದ ಇತರ ಮೂವರನ್ನು  ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಸಂಬಂಧಿಕರ ಮದುವೆಗೆ ಬೊಲೆರೋದಲ್ಲಿ  ಡಯಾನಾ ಮಸ್ಕರೇನಸ್ ತಮ್ಮ ಫ್ಯಾಮಿಲಿ ಜೊತೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.

 

ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ಶಾಂಭವಿ ನದಿಯ ತಡೆಯಿಲ್ಲದೆ ಸೇತುವೆ ದಾಟುತ್ತಿದ್ದಾಗ ಬೊಲೆರೋ ಆಯತಪ್ಪಿ ನದಿಗೆ ಬಿದ್ದಿದೆ. ಸ್ಥಳದಲ್ಲಿದ್ದ ಸ್ಥಳೀಯರು ಮೂವರು ಮಂದಿಯನ್ನು ನದಿಯಿಂದ ಮೇಲಕೆತ್ತಿದ್ದರು. ಆದರೆ ಡಯಾನಾ ಮಸ್ಕರೇನಸ್ ನಿರುಪಾಲಾಗಿದ್ದರು. ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಯಾನಾ ಮಸ್ಕರೇನಸ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related posts

Leave a Reply