Header Ads
Header Ads
Breaking News

ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಕುಂದಾಪುರ: ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಎಡಮಾವಿನಹೊಳೆ ಬೊಬ್ಬರ್ಯ ಗುಂಡಿ ಹೊಳೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ವ್ಯಾಪಕ ಹುಡುಕಾಟ ಆರಂಭಿಸಲಾಗಿದೆ. ಕಂಬದಕೋಣೆ ದೊಡ್ಮನೆ ಹಳೆಗೇರಿ ನಿವಾಸಿ ವೆಂಕಪ್ಪ ಶೆಟ್ಟರ ಪುತ್ರ ವಂಶಿತ್ ಶೆಟ್ಟಿ (12) ಮೃತ ದುರ್ದೈವಿ. ಹಳಗೇರಿ ಪಟೇಲರಮನೆ ನಿವಾಸಿ ರತ್ನಾಕರ ಶೆಟ್ಟಿಯವರ ಪುತ್ರ ರಿತೇಶ್ (12)ಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.

ದಸರಾ ರಜೆ ಹಿನ್ನೆಲೆ ನದಿ ಸಮೀಪದಲ್ಲಿ ಆಟವಾಡಲು ಗೆಳೆಯರೊಂದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾಲಕರು ಆಟವಾಡಿದ ಬಳಿಕ ಕಾಲು ತೊಳೆಯಲು ನೀರಿಗಿಳಿದ ವೇಳೆಯಲ್ಲಿ ಓರ್ವ ಬಾಲಕ ಕಾಲುಜಾರಿ ನದಿಯಲ್ಲಿ ಮುಳುಗಿದ್ದಾನೆ. ಈ ವೇಳೆ ಆತನ ರಕ್ಷಣೆಗೆ ಧಾವಿಸಿದ ಇನ್ನೋರ್ವ ಬಾಲಕನೂ ನೀರುಪಾಲಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಭೇಟಿ ನೀಡಿದ್ದಾರೆ. ಬೈಂದೂರು ಸರ್ಕಲ್ ಇನ್ಸ್‍ಪೆಕ್ಟರ್ ಭೇಟಿ ನೀಡಿದ್ದು, ಕುಂದಾಪುರ ಅಗ್ನಿಶಾಮಕದಳ ಸಿಬ್ಬಂದಿಗಳು, ಮುಳುಗು ತಜರು ಸಾರ್ವಜನಿಕರ ಸಹಕಾರದೊಂದಿಗೆ ಬಾಲಕನ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *