Header Ads
Header Ads
Breaking News

ನದಿ ತೀರದ ಮನೆಗಳು ಜಲಾವೃತವಾಗಿರುವುದು. ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆ. ನೆರವಿಗೆ ನಿಂತ ಸ್ಥಳೀಯ ಯುವಕರು.

ಉಳ್ಳಾಲ: ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ಥಳೀಯ ಜನವಸತಿ ಪ್ರದೇಶಗಳು ಜಲಾವೃತವಾಗಿದೆ.ಗುರುವಾರ ತಡರಾತ್ರಿಯಿಂದ ನೆರೆ ಬಂದಿದ್ದು, ಸುಮಾರು 50ಕ್ಕು ಅಧಿಕ ಮನೆಗಳು ಜಲಾವೃತವಾಗಿದೆ. ಉಳಿಯ ನಿವಾಸಿಗಳ ಮನೆಗಳ ಅಂಗಳದಲ್ಲಿ ನೀರು ತುಂಬಿದೆ.
ತಡರಾತ್ರಿ 11 ಗಂಟೆ ನಂತರ ಮನೆ ಅಂಗಳವಿಡೀ ಜಲಾವೃತವಾಗಿದೆ.

ಎಲ್ಲರೂ ಮನೆಯೊಳಗೆ ನೀರು ಬರುವ ಆತಂಕದಲ್ಲಿ ಸಾಮಾಗ್ರಿಗಳನ್ನು ಮೇಲಕ್ಕೆ ಇಟ್ಟಿದ್ದಾರೆ. ಸ್ಥಳೀಯ ಯುವಕರೆಲ್ಲರೂ ಸೇರಿಕೊಂಡು ಹೊರಗಡೆಯೇ ಸ್ಥಳೀಯರ ನೆರವಿಗೆ ನಿಂತಿದ್ದರು. ಹಲವು ವರ್ಷಗಳ ಬಳಿಕ ಈ ಭಾಗದಲ್ಲಿ ನೆರೆ ನೀರು ತುಂಬಿದೆ . ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಅವಶ್ಯಕತೆ ಬಿದ್ದಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಪ್ರಮೀಳಾ ಡಿಸೋಜ ತಿಳಿಸಿದ್ದಾರೆ.

Related posts

Leave a Reply