Header Ads
Header Ads
Header Ads
Header Ads
Header Ads
Header Ads
Breaking News

ನದಿ ದಾಟಿ ಮನೆ ಸೇರುವ ಗ್ರಾಮಸ್ಥರು : ಮಳೆಗಾಲದಲ್ಲಿ ಆಯ ತಪ್ಪಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

ಸುಳ್ಯ: ಆ ಊರು “ನಲವತ್ತು ವರ್ಷಗಳ ಹಿಂದೆ ಹೇಗಿತ್ತೋ ಇಂದು ಕೂಡ ಹಾಗೆಯೇ ಇದೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದಿದ್ದರೂ ಈ ಹಳ್ಳಿಯ ಸ್ಥಿತಿ ಬದಲಾಗಿಲ್ಲ. ಮುಂಗಾರು ಆರಂಭವಾಯಿತು ಎಂದರೆ ಇಲ್ಲಿಯವರಿಗೆ ಸಂಕಷ್ಟದ ಸರಮಾಲೆಗಳ ಅವಧಿ. ಮಕ್ಕಳಿಗೆ ಹೊಳೆ ದಾಟುವ ಚಿಂತೆ. ಪೋಷಕರಿಗೆ ಮಕ್ಕಳ ಪ್ರಾಣದ ಭೀತಿ. ಅಲ್ಲದೇ ನದಿಯಲ್ಲಿ ನೀರು ತುಂಬಿ ಹರಿಯುವಾಗ 7-8 ಕಿಮೀ ಸುತ್ತು ಬಳಸಿ ಮನೆ ಸೇರಬೇಕಾದ ಅನಿವಾರ್ಯತೆ. ಇದು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಪೂಂಬಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಥೆ.
ಮಡಪ್ಪಾಡಿ ಗ್ರಾಮದಿಂದ ಪೂಂಬಾಡಿಯ ಪ್ರದೇಶದ ಭಾಗಗಳನ್ನು ತಲುಪಲು ಪೂಂಬಾಡಿ ಎಂಬ ಸ್ಥಳದಲ್ಲಿ ಹರಿಯುವ ಹೊಳೆ ದಾಟಿ ತೆರಳಬೇಕು. ಮಳೆಗಾಲದಲ್ಲಿ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಇದರಿಂದ ಈ ಭಾಗದವರಿಗೆ ಸಮಸ್ಯೆ ಆಗುತ್ತದೆ. ಈ ಪ್ರದೇಶದಿಂದ ಮಡಪ್ಪಾಡಿ ಅಂಗನವಾಡಿ ಪ್ರಾಥಮಿಕ ಶಾಲೆ, ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿದ್ದಾರೆ. ಅವರಿಗೆ ಮಳೆಗಾ¯ದಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮಳೆಗಾಲದಲ್ಲಿ ಹೊಳೆ ದಾಟುವುದಕ್ಕೆ ಸಾಧ್ಯವಿಲ್ಲ. ಬದಲಾಗಿ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸುಮಾರು 7-8 ಕಿ.ಮೀ ಸುತ್ತು ಬಳಸಿ ಸಂಚಾರಿಸಬೇಕಾದ ಅನಿವಾರ್ಯತೆ ಈ ಗ್ರಾಮಸ್ಥರದ್ದು. ಹೊಳೆಯಲ್ಲಿ ಕಡಿಕೆ ನೀರು ಇದ್ದರೆ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಇಟ್ಟಕೊಂಡು ಹೊಳೆ ದಾಟುವ ಸಾಹಸ ಮಾಡುತ್ತಿದ್ದಾರೆ. ಇಲ್ಲಿಗೆ ಶಾಶ್ವತವಾಗಿ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ ಇಲ್ಲಿಯ ನಾಗರಿಕರು. ಇವರ ಬೇಡಿಕೆಗೆ ಜನಪ್ರತಿನಿಧಿಗಳ ಮನ: ಕರಗಲಿಲ್ಲ. ವರ್ಷಂಪ್ರತಿ ನೀಡುವ ಭರವಸೆ ಮಾತ್ರ ಬಂಡೆ ಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ. ಇದುವರೆಗೆ ಪ್ರಯೋಜನಕ್ಕೆ ಬಂದಿಲ್ಲ.
ಇಲ್ಲಿಯ ಜ್ವಲಂತ ಸಮಸ್ಯೆ ಕುರಿತು ಇಲ್ಲಿಯವರು ಸಚಿವರು, ಸಂಸದರು, ಶಾಸಕರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಎಲ್ಲರಿಗೂ ಮನವಿ ನೀಡಿ ಅವರೆಲ್ಲರ ಗಮನಕ್ಕೆ ತಂದಿದ್ದಾರೆ. ಗ್ರಾಮ ಸಭೆಗಳಲ್ಲೂ ಪ್ರಸ್ತಾಪ ಮಾಡಿದ್ದಾರೆ. ಸಂಸದರು, ಶಾಸಕರು ಇತರೆ ಜನಪ್ರತಿನಿಧಿಗಳು ಹೀಗೆ ಇವರೆಲ್ಲರೂ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಸ್ಪಂದಿಸುವ ಭರವಸೆ ಇತ್ತು ಹೋಗಿದ್ದು ಬಿಟ್ಟರೆ ಇದುವರೆಗೆ ಪರಿಹಾರದ ಕುರಿತು ಗಮನಹರಿಸಿಲ್ಲ.
ಸರಕಾರದ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ಅಸಡ್ಡೆಯಿಂದ ಸೇತುವೆ ಇಲ್ಲಿ ನಿರ್ಮಾಣ ಆಗಿಲ್ಲ. ಇಲ್ಲಿ ರಾಜಕೀಯ ಪೈಪೋಟಿಗೆ ಇಳಿದಷ್ಟು ಸೇತುವೆ ನಿರ್ಮಾಣಕ್ಕೆ ಆಸಕ್ತಿ ತೋರಿಸಿಲ್ಲ. ಒಟ್ಟಿನಲ್ಲಿ ಇಲ್ಲಿ ಮುಗ್ಧ ಮಕ್ಕಳ ಮತ್ತು ನಾಗರಿಕರ ಬದುಕಿನ ಜೊತೆ ಚೆಲ್ಲಾಟದ ಪರಿಣಾಮ ಸಮಸ್ಯೆ ಜೀವಂತವಿದೆ.
ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿ ಪ್ರಶಾಂತ್ ಪೂಂಬಾಡಿ ಪ್ರತಿಕ್ರಿಯೆ ನೀಡಿ ಮಡಪ್ಪಾಡಿಯಿಂದ – ಪೂಂಬಾಡಿಗೆ ಸಂಪರ್ಕ ಕಲ್ಪಿಸಲು ಸರ್ವಋತು ಸೇತುವೆ ಅಗತ್ಯ ಇದೆ. ಹಲವು ವರ್ಷಗಳಿಂದ ಈ ಪ್ರದೇಶಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಮಳೆಗಾಲದಲ್ಲಿ ಪೂಂಬಾಡಿ ಪ್ರದೇಶದ ಜನರು ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಶಾಶ್ವತವಾದ ಸೇತುವೆಯ ನಿರ್ಮಾಣ ಇಲ್ಲಿ ಆಗಲೇಬೇಕು. ಹಾಗಾಗಿ ಇಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ, ನಾಗರಿಕರ ಕಷ್ಟ ನಿವಾರಣೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು.

Related posts

Leave a Reply

Your email address will not be published. Required fields are marked *