Header Ads
Header Ads
Header Ads
Breaking News

ನನ್ನ ಬಗ್ಗೆ ಮಾತನಾಡುವರು ನೇರವಾಗಿ ಸಂವಾದಕ್ಕೆ ಬರಲಿ ಹಾಲಾಡಿಯಿಂದ ವಿರೋಧಿಗಳಿಗೆ ಒಪನ್ ಚಾಲೆಂಜ್

ಕುಂದಾಪುರ: ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ನನ್ನ ಬಗ್ಗೆ ಅಶ್ಲೀಲವಾಗಿ ಬರೆಯುವವರು ನೇರವಾಗಿ ಸಂವಾದಕ್ಕೆ ಬರಲಿ ಅಲ್ಲಿ ನಾನು ಅವರಿಗೆ ಉತ್ತರ ನೀಡುತ್ತೇನೆ. ಎಲ್ಲಿ ಬೇಕಾದರೂ ಸಂವಾದವಿಡಲಿ ನಾನು ಖಂಡಿತ ಬರುತ್ತೇನೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಅವರು ಹಾಲಾಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಹಿಂದೆ ಕೆಲ ತುಂಟ ವಿದ್ಯಾರ್ಥಿಗಳು ಗೋಡೆಯ ಮೇಲೆ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದರು. ಅದೇ ರೀತಿ ಇವರು ವಾಟ್ಸ್‌ಪ್‌ಗಳಲ್ಲಿ ಬರೆಯುತ್ತಿದ್ದಾರೆ. ನನ್ನ ಮೇಲೆ ಏನೆ ಭಿನ್ನಾಭಿಪ್ರಾಯವಿದ್ದರೂ ಚರ್ಚೆಗೆ ಕರೆಯಲಿ ಅಲ್ಲೇ ಅವರಿಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದರು.

ರಾಜಕೀಯ ನಿವೃತ್ತಿಯಾಗುತ್ತಿರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮೂರು ಅವಧಿಗೆ ಮಾತ್ರ ಶಾಸಕನಾಗುತ್ತೇನೆ ಎಂದು ತಿಳಿಸಿದ್ದೇ. ಆದರೆ ಅಂದು ನಡೆದ ಒಂದು ಘಟನೆಯಿಂದ ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ನನ್ನ ಮುಂದಿನ ನಡೆಯ ಬಗ್ಗೆ ನನಗೆ ಗೊತ್ತಿಲ್ಲ. ನಾನಿನ್ನು ನಿರ್ಧರಿಸಿಲ್ಲ. ನನ್ನ ಬೆಂಬಲಿಗರ ಅನಿಸಿಕೆ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಬಿಜೆಪಿ ಪಕ್ಷದಲ್ಲಿ ಒಡಕುಂಟು ಮಾಡಲು ನಾನ್ಯಾರು ನಾನು ಪಕ್ಷೇತರ ಶಾಸಕ. ನಾನು ಇಲ್ಲಿಯವರೆಗೂ ಯಾವುದೇ ಬಣ ರಾಜಕೀಯ ನಡೆಸಿಲ್ಲ, ಕ್ಷೇತ್ರ ರಾಜಕೀಯ ಕೂಡ ನಡೆಸಿಲ್ಲ. ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಿಂದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ನಾನು ಬೆಂಬಲ ಸೂಚಿಸಿದ್ದೇನೆ. ಮುಂದೇನು ಎನ್ನುವುದು ಮಾತ್ರ ನನಗೆ ಗೊತ್ತಿಲ್ಲ ಎಂದರು.

Related posts

Leave a Reply