Header Ads
Header Ads
Breaking News

ನಮಗೆ ಯಾವುದೇ ಆಪರೇಷನ್ ಭೀತಿ ಇಲ್ಲ : ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಹೇಳಿಕೆ

ಬಿಜೆಪಿಯವರ ಆಪರೇಶನ್ ಕಮಲದ ವಿಚಾರದಲ್ಲಿ ನಮಗೆ ಯಾವುದೇ ಭೀತಿ ಇಲ್ಲ. ಕಳೆದ ಎಂಟು ತಿಂಗಳಿಂದ ಅಂಥ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಮೈತ್ರಿ ಸರ್ಕಾರವು ಐದು ವರ್ಷ ಪೂರ್ತಿ ಅಧಿಕಾರದಲ್ಲಿರುತ್ತದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ನಾಪತ್ತೆಯಾದವರು ಹಿರಿಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಜೊತೆಗೆ ಬಿಜೆಪಿಯ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಯಾರ್‍ಯಾರು ಇದ್ದಾರೆ ಅನ್ನುವುದನ್ನು ಈಗ ಹೇಳೋಕೆ ಆಗಲ್ಲ ಎಂದು ಸಚಿವ ಖಾದರ್ ಹೇಳಿದರು.

Related posts

Leave a Reply