Header Ads
Breaking News

ನಮ್ಮಲ್ಲಿ ಚಂಡಮಾರುತವೂ ಬೇಡ, ಸುನಾಮಿ ಬರುವುದೂ ಬೇಡ : ಕಂದಾಯ ಸಚಿವ ದೇಶ್‌ಪಾಂಡೆ ಹೇಳಿಕೆ

ನಮ್ಮಲ್ಲಿ ಚಂಡಮಾರುತವೂ ಬೇಡ, ಸುನಾಮಿ ಬರುವುದೂ ಬೇಡ. ಅದಕ್ಕೆಂದು ಮೀಸಲಿಟ್ಟ ಕಟ್ಟಡ ಶಾಲೆಯ ಕಟ್ಟಡ ಆಗಿ ಮಕ್ಕಳು ವಿದ್ಯಾಭ್ಯಾಸ ಕಲಿತು ಉತ್ತಮ ಪ್ರಜೆಗಳಾಗಿ ದೇಶಕ್ಕೆ ಆಸ್ತಿಯಾಗಲಿ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ಅವರು ಮಂಗಳವಾರ ಕಾಪು ಸರಕಾರಿ ಪ್ರಥಮ ದರ್ಜೆ ಶಾಲೆಯ ಬಳಿ ವಿವಿದ್ದೋದ್ದೇಶ ಚಂಡಮಾರುತದ ಆಶ್ರಯ ತಾಣ ನಿರ್ಮಾಣ ಹಾಗೂ ಹೆಜಮಾಡಿ ಕೋಡಿ ಮೀನುಗಾರಿಕಾ ರಸ್ತೆ ಅಭಿವೃದ್ಧಿಗಳ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನೂತನ ಕಟ್ಟಡವು ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಸರಕಾರ 75 ಪ್ರತಿಶತ ಹಾಗೂ ರಾಜ್ಯ ಸರಕಾರ 25ಪ್ರತಿಶತ ಹೂಡಿಕೆಯಿಂದ ಮಾಡಲಾಗಿದೆ. ಸರಿ ಸುಮಾರು 2.45 ಕೋಟಿ ರೂ ವೆಚ್ಚದಲ್ಲಿ ಈ ಕಟ್ಟಡವನ್ನು ಮಾಡಲಾಗಿದೆ ಎಂದರು.ಸುನಾಮಿ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪದ ಸಂದರ್ಭ ಸುಮಾರು 750 ಮಂದಿ ಈ ಕಟ್ಟಡದಲ್ಲಿ ಆಶ್ರಯ ಪಡೆಯಬಹುದು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೂ ಇದೆ. ಅಂತೆಯೇ ಇಲ್ಲಿ ಗಂಜೀ ಕೇಂದ್ರಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಕಾಪು ಕೇತ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳಿದ್ದು, ಅದನ್ನು ಆದಷ್ಟು ಶೀಘ್ರವಾಗಿ ನಿವಾರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಶಾಲಾ ಆವರಣದಲ್ಲಿ ರಾಜ್ಯ ಅರಣ್ಯ ವಿಭಾಗದ ಕಾಪು ವಿಭಾಗದ ವನಪಾಲಕ ನಾಗೇಶ ಬಿಲ್ಲವ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಸಸಿ ನೆಟ್ಟು ವನ ಮಹೋತ್ಸವವನ್ನು ಸಚಿವ ದೇಶಪಾಂಡೆ ನೆರವೇರಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಹೆಪ್ಸಿಬಾ ಕೊರ್ಲ ಪಾಟಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್‍ಯ ನಿರ್ವಹಣಾ ಅಧಿಕಾರಿ ಸಿಂಧು ಬಿ. ರೂಪೇಶ್, ಐವನ್ ಡಿಸೋಜ, ತಾಲೂಕು ಪಂಚಾಯತ್ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *