Header Ads
Header Ads
Breaking News

ನಮ್ಮ ಗ್ರಾಮ ನಮ್ಮ ರಸ್ತೆ ಅಡಿಯಲ್ಲಿ ನಿರ್ಮಾಣವಾದ ರಸ್ತೆ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಇಂಜಿನಿಯರಿಗೆ ಘೆರಾವ್ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಘಟನೆ

ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ನಮ್ಮ ಗ್ರಾಮ ನಮ್ಮ ರಸ್ತೆಯ ಅಡಿಯಲಿ, ನಿರ್ಮಾಣವಾದ ರಸ್ತೆಯು ಕಳಪೆ ಕಾಮಗಾರಿಯಾದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಂಜಿನಿಯರ್‌ಗೆ ಘೇರಾವ್ ಹಾಕಿದ ಘಟನೆ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ನಮ್ಮ ಗ್ರಾಮ ನಮ್ಮ ರಸ್ತೆ, ಹಂತ ನಾಲ್ಕರ ಅಡಿಯಲಿ, ಯೋಜನಾ ಉಪಯೋಗ ಕಾರವಾರ ವಿಭಾಗದಿಂದ ಒಂದು ಕೋಟಿ ಐವತ್ತೆರಡು ಲಕ್ಷ ರೂಪಾಯಿ ವೆಚ್ಚದಲ್ಲಿ 1.20 ಕಿಲೊ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗಿತ್ತು. ರಸ್ತೆ ಕಾಮಗಾರಿ ಚಾಲನೆಯಲ್ಲಿದ್ದು ರಸ್ತೆಯ ಡಾಂಬರಿಕರಣ ಸಂಪೂರ್ಣವಾಗಿ ಮುಗಿದಿದ್ದು, ರಸ್ತೆಯ ಇಕ್ಕೆಲಗಳಿಗೆ ತಡೆಗೋಡೆಯ ಕಾಮಗಾರಿ ಬಾಕಿ ಇದೆ.

ಆದರೆ ರಸ್ತೆಯು ಈಗಾಗಲೆ ಸಂಪೂರ್ಣ ಕಿತ್ತು ಹೊಗುತ್ತಿದ್ದು, ರಸ್ತೆಯ ಕಾಮಗಾರಿ ಎಷ್ಟು ಕಳಪೆಯಾಗಿದೆ ಎಂದರೆ ರಸ್ತೆಯಲ್ಲಿ ವಾಹನ ತಿರುಗಾಡುವುದು ಹಾಗಿರಲಿ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿದರೆ ರಸ್ತೆಯು ಕಿತ್ತು ಹೋಗುತ್ತದೆ. ರಸ್ತೆಯಲ್ಲಿ ಜಾನುವಾರುಗಳು ತಿರುಗಾಡಿದರೆ ರಸ್ತೆಯು ಕಿತ್ತು ಬರುತ್ತದೆ. ಕೋಟಿ ರೂಪಾಯಿ ವೆಚ್ಚದ ರಸ್ತೆಯ ಕಾಮಗಾರಿ ಮುಗಿಯುವ ಮೊದಲೆ ಈ ಪ್ರಮಾಣದಲ್ಲಿ ಹಾಳಾಗುತ್ತಿದ್ದರೆ, ಈ ಕಾಮಗಾರಿ ಯಾವ ಪ್ರಮಾಣದಲ್ಲಿ ಕಳಪೆಯಾಗಿದೆ ಎನ್ನುವುದು ತಿಳಿಯುತ್ತದೆ. ಈ ಬಗ್ಗೆ ಮುಟ್ಟಳಿ ಗ್ರಾಮ ಪಂಚಾಯತ್ ಸಾರ್ವಜನಿಕರು, ರಸ್ತೆ ಪರಿಶೀಲನೆಗಾಗಿ ಬಂದಂತ ಇಂಜಿನಿಯರ್ ಧನರಾಜ್ ಅವರನ್ನು ಘೇರಾವ್ ಹಾಕಿ, ರಸ್ತೆ ಕಾಮಗಾರಿ ನಡೆಸಿದ, ಟೆಂಡರದಾರರಾದ ರಾಮ ಮೊಗೇರ್ ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಇಂಜಿನಿಯರ ಧನರಾಜ್ ಗುತ್ತಿಗೆದಾರರಾದ ರಾಮ ಮೊಗೇರಗೆ ದೂರವಾಣಿ ಕರೆ ಮಾಡಿ, ಕಳಪೆ ಕಾಮಗಾರಿಯ ಬಗ್ಗೆ ತಿಳಿಸಿದಾಗ, ಮರು ಡಾಂಬರಿಕರಣ ಮಾಡಿ ಕೋಡುವುದಾಗಿ ಭರವಸೆಯನ್ನು ನೀಡಿದರು.

ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಇಂಜಿನಿಯರ್ ಧನ್‌ರಾಜ್ ಮಾತನಾಡಿ, ನಾನು ರಸ್ತೆಯನ್ನು ಪರಿಶೀಲನೆ ಮಾಡಿದಾಗ, ಈ ರಸ್ತೆ ಕಾಮಗಾರಿಯು ಕಳಪೆ ಕಾಮಗಾರಿಯಂತಲೆ ಹೇಳಬಹುದು. ಈ ರಸ್ತೆಗೆ ಮರು ಡಾಂಬರಿಕರಣ ನಡೆಯ ಬೇಕಾಗಿದೆ. ಈ ಬಗ್ಗೆ ನಾನು ಮೆಲಾಧಿಕಾರಿಗಳ ಜೋತೆ ಮಾತನಾಡಿ, ಶೀಘ್ರವೆ ಮರು ಡಾಂಬರಿಕರಣ ಮಾಡುವಂತ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದರು .ರಸ್ತೆ ಕಾಮಗಾರಿ ಮುಗಿಯುವ ಮೊದಲೆ ಕೋಟಿ ವೆಚ್ಚದ ಕಾಮಗಾರಿ ಸಂಪೂರ್ಣ ಹಾಳಾಗುತ್ತದೆ ಎಂದರೆ, ಇದಕ್ಕೆ ಯಾರು ಜವಾಬ್ದಾರರು? ಒಂದು ಕಾಮಗಾರಿಯನ್ನು ನಡೆಸುವಾಗಲೆ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಿದರೆ, ಒಂದೆ ಕಾಮಗಾರಿಗಳನ್ನು ಏರಡೆರಡು ಬಾರಿ ಮಾಡುವ ಪ್ರಸಂಗ ಬಂದೊದಗುವುದಿಲ್ಲಾ ಎನ್ನುವುದು ಸಾರ್ವಜನಿಕರ ಮಾತಾಗಿದೆ.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply