Header Ads
Header Ads
Breaking News

ನರ್ಮ್ ಬಸ್‌ನಲ್ಲಿ ಮಂತ್ರಿ ಪ್ರಮೋದ್ ಸಂಚಾರ, ಒಂದೇ ದಿನ ಹನ್ನೊಂದು ರಸ್ತೆಗಳಿಗೆ ಭೂಪೂಜೆ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ಸಚಿವ ಪ್ರಮೋದ್ ಮಧ್ವರಾಜ್ ಅವರು ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಗ್ರಾಮ ಸಡಕ್ ಯೋಜನೆಯಡಿ ೨೦.೮೩ ಕಿಮೀ ಉದ್ದದ ಒಟ್ಟು ರೂ. ೨೮.೭೬ ಕೋಟಿ ವೆಚ್ಚದ ೧೧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಅವರು ಮಾತನಾಡಿ, ನಾಲ್ಕು ವರ್ಷಗಳ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರೂ. ೩೫.೨ಕೋಟಿ ವೆಚ್ಚದಲ್ಲಿ ೫೭.೩೭ ಕಿ.ಮೀ ಉದ್ದದ ೨೬ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸ ಲಾಗಿದೆ ಎಂದು ಹೇಳಿದರು. ಕ್ಷೇತ್ರದ ಜನತೆಯ ಬೇಡಿಕೆಗೆ ಅನುಗುಣವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಗುಣ ಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳನ್ನು ೫ ವರ್ಷಗಳ ಕಾಲ ವಾರ್ಷಿಕ ನಿರ್ವಹಣೆ ಹಾಗೂ ೬ನೇ ವರ್ಷದಲ್ಲಿ ರಸ್ತೆಯ ನವೀಕರಣ ಜವಾಬ್ದಾರಿಯನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ವಹಿಸಲಾಗಿದೆ. ಇದರಿಂದ ಕನಿಷ್ಠ ೧೦ ವರ್ಷಗಳ ಕಾಲ ಜನತೆಗೆ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ದೊರೆಯಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ೬೬ರಿಂದ ಬ್ರಹ್ಮಾವರ ಕೃಷಿ ಕೇಂದ್ರದವರೆಗಿನ ಸುಮಾರು ರೂ. ೩೦೫.೩೦ ಲಕ್ಷದ ರಸ್ತೆ ಕಾಮಗಾರಿ, ರೂ. ೧೬೭.೧೦ ಲಕ್ಷದ ಕೆಮ್ಮಣ್ಣು ಜ್ಯೋತಿ ನಗರದಿಂದ ನೇಜಾರು ರಸ್ತೆ ಕಾಮಗಾರಿ, ರೂ. ೨೨೬.೧೦ ಲಕ್ಷದ ನೇಜಾರು ಜಂಗಮರಬೆಟ್ಟುವಿನಿಂದ ನಿಡಂಬಳ್ಳಿ ಕೆಮ್ಮಣ್ಣು ರಸ್ತೆ ಕಾಮಗಾರಿ, ರೂ. ೨೧೪.೬೦ ಲಕ್ಷದ ರಾಮನ್ಕುದ್ರುನಿಂದ ನಂದನ್ಕುದ್ರು ನೀಲಾವರ ಲಿಂಕ್ ರಸ್ತೆ ಕಾಮಗಾರಿ, ರೂ. ೧೮೪.೭೦ ಲಕ್ಷದ ಬಾಯರ ಬೆಟ್ಟುವಿನಿಂದ ಕಕ್ಕುಂಜೆ ಗೋರ್ಪಳ್ಳಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸೂರುಂಟೆ ಕಂಬಲಗದ್ದೆ ಎಲ್ಲಂಪಳ್ಳಿ ರಸ್ತೆ ಕಾಮಗಾರಿ, ಕರ್ಜೆ ಹಲುವಳ್ಳಿ ಹಿಂಕ್ಲಾಡಿ ರಸ್ತೆ ಕಾಮಗಾರಿ, ಸಾಸ್ತಾವು ಹಲುವಳ್ಳಿ ಕಂಗಿಬೆಟ್ಟು ರಸ್ತೆ ಕಾಮಗಾರಿ, ಕೆಂಜೂರು ನಾಲ್ಕೂರುರಿಂದ ಚಪ್ಪರ್ಮಠ ಮೂಡಬೆಟ್ಟು ರಸ್ತೆ ಕಾಮಗಾರಿ ಹಾಗೂ ಕಳತ್ತೂರು ಸೀತಾನದಿಯಿಂದ ಸಂತೆಕಟ್ಟೆಯ ವರೆಗಿನ ರಸ್ತೆ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ಮಾಡಿದರು. ಇಡೀ ಕ್ಷೇತ್ರದಲ್ಲಿ ನಡೆದ ಎಲ್ಲ ಕಾಮಗಾರಿ ಪ್ರದೇಶಗಳಿಗೆ ಸಚಿವರು ಕೆ‌ಎಸ್‌ಆರ್ಟಿಸಿಯ ನರ್ಮ್ ಬಸ್ನಲ್ಲಿ ತೆರಳಿ ಭೂಮಿಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು.

Related posts

Leave a Reply