Header Ads
Header Ads
Breaking News

ನರ್ಮ್ ಬಸ್ ಓಡಾಟಕ್ಕೆ ತಡೆಯಾಜ್ಞೆ ವಿಚಾರ ಅನಗತ್ಯವಾಗಿ ಬಿಜೆಪಿಯನ್ನು ಎಳೆತಂದ ಕಾಂಗ್ರೆಸ್ ಉಡುಪಿಂiiಲ್ಲಿ ಬಿಜೆಪಿ ಸ್ಪಷ್ಟನೆ


ಉಡುಪಿಯಲ್ಲಿ ೫೫ ನರ್ಮ್ ಬಸ್ ಗಳ ಓಡಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಪರಸ್ಪರ ಮಾತಿನ ಆರೋಪದಲ್ಲಿ ತೊಡಗಿದೆ. ಇತ್ತೀಚಿಗೆ ಕಾಂಗ್ರೆಸ್ ಈ ಬಗ್ಗೆ ಪ್ರತಿಭಟನೆ ನಡೆಸಿ ತಡೆಯಾಜ್ಞೆ ತಂದದ್ದು ಬಿಜೆಪಿ ಮುಖಂಡ ಎಂದು ಅರೋಪಿಸಿತ್ತು. ಇದಕ್ಕೆ ಇಂದು ಎದಿರೇಟು ನೀಡಿರುವ ಬಿಜೆಪಿ ನರ್ಮ್ ಬಸ್ ತಡೆಯಾಜ್ಞೆಗೂ-ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ತಾನು ಮಾಡಿರುವ ತಪ್ಪನ್ನು ಮುಚ್ಚಿ ಹಾಕಲು ಇದೀಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ತಡೆಯಾಜ್ಞೆ ತಂದವರಲ್ಲಿ ಕಾಂಗ್ರೆಸ್ ಮುಖಂಡರೇ ಹೆಚ್ಚಿನವರು ಆಗಿದ್ದಾರೆ. ಕಾರಾವಳಿ ಭಾಗದಲ್ಲಿ ಅತೀ ಹೆಚ್ಚು ಖಾಸಗೀ ಬಸ್ ಹೊಂದಿರುವವರು ಕಾಂಗ್ರೆಸ್ ಮುಖಂಡರೇ ಆಗಿದ್ದಾರೆ. ಆದ್ರೆ ಇದನ್ನೆಲ್ಲಾ ಮುಚ್ಚಿ ಹಾಕಿ ಬರೇ ಬಿಜೆಪಿಯ ಓರ್ವ ಮುಖಂಡರ ಬಗ್ಗೆ ಹೇಳುತ್ತಿರುವುದು ತನ್ನ ತಪ್ಪನ್ನು ಮುಚ್ಚಿ ಹಾಕಲು ಎಂದು ಆರೋಪಿಸಿದರು.


ಇನ್ನು ಮಾಜಿ ಶಾಸಕ ರಘುಪತಿಭಟ್ ಮಾತನಾಡಿ ಬಸ್ ರೂಟ್‌ನೀಡಿರುವ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀqದೆಯೇ ಹೊರತು ಬಿಜೆಪಿ ಅಂತ ಅಲ್ಲ. ರೊಟ್ ಪರ್ಮಿಟ್ ಕೊಡುವಗ ಅದ ತಪ್ಪಿನಿಂದ ಈ ಸಮಸ್ಯೆ ಆಗಿದೆ. ಆದ್ರೆ ಬಿಜೆಪಿಯ ಕುಯಿಲಾಡಿ ಸುರೇಶ್ ನಾಯಕ್ ತಮ್ಮ ವ್ಯವಹಾರದ ಕಾರಣಕ್ಕಾಗಿ ಹೈಕೋರ್ಟ್ ಸ್ಟೇ ಹೋಗಿದ್ದಾರೆ. ಆದ್ರೆ ಕಾಂಗ್ರೆಸ್ ನವರು ಇದನ್ನು ರಾಜಕೀಯ ಮಾಡಿ ಜನರ ಹಾದಿ ತಪ್ಪಿಸಲು ಬಿಜೆಪಿ ಮಾಡಿದ್ದಾರೆ ಎಂದು ಡಂಗುರ ಸಾರುತ್ತಿದೆ. ಇದಕ್ಕೆ ನೇರ ಹೊಣೆ ಜಿಲ್ಲಾ ಉಸ್ತುವಾರಿ ಸಚಿವರು ಸಚಿವರಿಗೆ ನರ್ಮ್ ಬಸ್ ಹಾಕಿಸಿದ್ದೂ ಆಯಿತು.. ಅತ್ತ ಸ್ಟೇ ತರುವ ಮೂಲಕ ಖಾಸಗೀಯವರಿಗೆ ಖುಷಿಯೂ ಕೊಟ್ಟದ್ದಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ದಿ ಬಳಿ ಆಸ್ಕರ್ ಫೆರ್ನಾಂಡೀಸ್, ಅಭಯ್ ಚಂದ್ರ ಜೈನ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರ ನಿಯೋಗ ಹೋಗಿ ನರ್ಮ್ ಬಸ್ ಹಾಕಬಾರದು ಎಂದು ಒತ್ತಡ ಹಾಕಿತ್ತು. ಆದ್ರೆ ಕಾಂಗ್ರೆಸ್ ತನ್ನ ಬಳಿ ಇರುವ ತಪ್ಪನ್ನು ಮುಚ್ಚಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.
ವರದಿ:ಪಲ್ಲವಿ ಸಂತೋಷ್

Related posts

Leave a Reply