Header Ads
Header Ads
Breaking News

ನಲವತ್ತನಾಲ್ಕನೆ ಜೂನಿಯರ್ ರಾಷ್ಟ್ರೀಯ ಈಜು, ಪುಣೆಯಲ್ಲಿ ಸಮಗ್ರ ಚಾಂಪಿಯನ್ ಎನಿಸಿದ ಕರ್ನಾಟಕ

ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕ ತಂಡ ಪುಣೆಯಲ್ಲಿ ಮುಕ್ತಾಯಗೊಂಡ ೪೪ನೇ?ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ ಷಿಪ್ನಲ್ಲಿ ಒಟ್ಟಾರೆ ೫೫೮ ಪಾಯಿಂಟ್ಸ್ ಕಲೆಹಾಕುವ ಮೂಲಕ ಸಮಗ್ರ ಪ್ರಶಸ್ತಿ ಎತ್ತಿ ಹಿಡಿದಿದೆ.
ಮೂರು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿರುವ ರಾಜ್ಯದ ಶ್ರೀಹರಿ ನಟರಾಜ್ ೩೭ ಪಾಯಿಂಟ್ಸ್ಗಳಿಂದ ಉತ್ತಮ ಈಜುಪಟು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಪದಕಗಳ ಪಟ್ಟಿಯಲ್ಲಿ ಕರ್ನಾಟಕ ೨೩ ಚಿನ್ನ, ೨೮ ಬೆಳ್ಳಿ, ೨೦ ಕಂಚಿನ ಪದಕಗಳನ್ನು ಗೆದ್ದು ಒಟ್ಟಾರೆ ೭೧ ಪದಕಗಳಿಂದ ಎರಡನೇ ಸ್ಥಾನದಲ್ಲಿದೆ. ೨೬ ಚಿನ್ನದ ಪದಕ ಗೆದ್ದಿರುವ ಮಹಾರಾಷ್ಟ್ರ ಒಟ್ಟು ೫೭ ಪದಕಗಳಿಂದ ಮೊದಲ ಸ್ಥಾನ ಗಳಿಸಿದೆ.
ಕರ್ನಾಟಕದ ಬಾಲಕರ ವಿಭಾಗ ೧೩೨ ಪಾಯಿಂಟ್ಸ್ಗಳಿಂದ ತಂಡ ಚಾಂಪಿಯನ್ಷಿಪ್ ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದರೆ, ಕರ್ನಾಟಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ಬಾರಿಯ ಚಾಂಪಿಯನ್ಷಿಪ್ನಲ್ಲಿ ೨೫ ನೂತನ ಕೂಟ ದಾಖಲೆಗಳನ್ನು ಈಜುಸ್ಪರ್ಧಿಗಳು ನಿರ್ಮಿಸಿದ್ದಾರೆ. ಅಂತಿಮ ದಿನ ಕರ್ನಾಟಕದ ಈಜುಪಟುಗಳು ಒಟ್ಟು ೧೨ ಪದಕಗಳನ್ನು ಗೆದ್ದುಕೊಂಡರು. ಅದರಲ್ಲಿ ಎರಡು ಚಿನ್ನದ ಪದಕಗಳು ಸೇರಿವೆ. ಗುಂಪು ೧ರ ೧೦೦ಮೀ ಬಾಲಕರ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ನಟರಾಜ್ ಇದೇ ವರ್ಷ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಬಾಲಕರ ೨೦೦ ಮೀ. ಬಟರ್ಫ್ಲೈ ವಿಭಾಗದಲ್ಲಿ ರಾಜ್ಯದ ಎಮ್. ರಾಹುಲ್ ಚಿನ್ನಕ್ಕೆ ಕೊರಳೊಡ್ಡಿದರು.

Related posts

Leave a Reply