Header Ads
Header Ads
Breaking News

ನಲಿಕೆಯವರ ಯುವ ವೇದಿಕೆಯಿಂದ ಪುಸ್ತಕ ವಿತರಣೆ

ಮೂಡುಬಿದಿರೆ : ನಲಿಕೆಯವರ ಯುವ ವೇದಿಕೆ ಮೂಡುಬಿದಿರೆ ವಲಯ ಇದರ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ವಲಯದ ಸ್ವಜಾತಿ ಬಾಂಧವರ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ನೂತನ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಅಭಿನಂದನಾ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ನಡೆಯಿತುಶಾಸಕ ಉಮಾನಾಥ ಕೋಟ್ಯಾನ್ ಅವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ನಲಿಕೆಯವರು ಭೂತಾರಾಧನೆಯ ಕಸುಬನ್ನು ಮಾಡುತ್ತಾ ಬರುತ್ತಿರುವವರು ನಲಿಕೆಯವರು. ಹಿಂದೆ ಕೇವಲ ದೈವಾರಾಧನೆಯನ್ನೇ ತಮ್ಮ ಜೀವನಾಧಾರವಾಗಿತ್ತು. ಆದರೆ ಇದೀಗ ಕಾಲಾಂತರದಲ್ಲಿ ಬದಲಾವಣೆಯಾಗಿದೆ.

   

ಶಿಕ್ಷಣವನ್ನು ಪಡೆಯುವ ಮೂಲಕ ವಿವಿಧ ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದೀರಿ ಎಂದು ಹೇಳಿದರು.ಭೂತಾರಾಧನೆ ಸಮಿತಿಯ ಅಧ್ಯಕ್ಷ ಎನ್.ಕೆ.ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಮಗುವಿಗೂ ಶಿಕ್ಷಣ ಅಗತ್ಯ. ಇಂದು ಪ್ರತಿಯೊಬ್ಬರು ಕೂಡಾ ತಕ್ಕಮಟ್ಟಿನಲ್ಲಿ ಸ್ಥಿತಿವಂತರಿದ್ದು ಹೆತ್ತವರು ತಮ್ಮ ಮಕ್ಕಳಿಗೆ ವಿದ್ಯೆಯನ್ನು ನೀಡುವ ಮೂಲಕ ಉತ್ತಮ ನಾಗರಿಕನನ್ನಾಗಿ ರೂಪಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.ಮೂಡುಬಿದಿರೆ ಯುವ ವೇದಿಕೆಯ ಅಧ್ಯಕ್ಷ ಸಂಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಹಿರಿಯ ದೈವ ನರ್ತಕ ಬಿರಾವು ಐತಪ್ಪ ಚಿಂತನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ರಾಜ್ಯ ಪ್ರಶಸ್ತಿ ವಿಜೇತ ಬಾಬು ಸಾಲ್ಯಾನ್ ಬೋಳ, ವರಂಗ ಶ್ರೀ ದೇವಿ ಮರುಳ ಚಿಕ್ಕಮ್ಮ ಸನ್ನಿದ್ಧಿಯ ಅನುವಂಶೀಯ ಮೊಕ್ತೇಸರ ನೋಣಯ್ಯ ಬಂಗೇರ, ನಲಿಕೆಯವರ ದ.ಕ ಜಿಲ್ಲಾ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply