Header Ads
Header Ads
Breaking News

ನಳಿನ್ ಕುಮಾರ್ ಕಟೀಲು ದ.ಕಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ : ಎ ಸಿ ವಿನಯಚಂದ್ರ ಹೇಳಿಕೆ

ಸುಮಾರು 29ವರ್ಷ ಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಬಂದಿದ್ದಾರೆ, ಸದಾನಂದ ಗೌಡ, ಧನಂಜಯ ಕುಮಾರ್ ಹಾಗೂ ನಳಿನ್ ಕುಮಾರ್ ಕಟೀಲು ದಕ್ಷಿಣ ಕನ್ನಡ ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ. ಯಾವುದೇ ಉದ್ಯೋಗ ಸೃಷ್ಟಿ ಮಾಡುವಂತಹ ಕೈಗಾರಿಕೆಗಳು ಅಥವಾ ಮಂಗಳೂರಿನ ಬೆಳವಣಿಗೆಗೆ ಯಾವುದೇ ಯೋಜನೆಗಳನ್ನು ತಂದ ನಿದರ್ಶನಗಳಿಲ್ಲ ಎಂದು ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಎಸಿ ವಿನಯ ರಾಜ್ ಆರೋಪಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ಭವನದಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಬಿ.ಸಿ ರೋಡ್-ಗುಂಡ್ಯ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಯೋಜನೆ. ಆದರೆ ಸಂಸದರ ವಿಫಲತೆಯಿಂದ ಈಗ ಯೋಜನೆ ಸ್ಥಗಿತಗೊಂಡಿದೆ. ಮಂಗಳೂರು ನಗgದ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಪಂಪ್ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಸುಮಾರು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ತೊಕ್ಕೊಟ್ಟು ಮೇಲ್ಸೇತುವೆಯ ಕಾಮಗಾರಿಯು ಅಪೂರ್ಣವಾಗಿದೆ ಎಂದು ಆರೋಪಿಸಿದರು.

ಇನ್ನು ಟೀಮ್ ಮೋದಿ ಎನ್ನುವ ಮೂಲಕ ಜನರನ್ನು ಮೋಡಿ ಮಾಡುವ ಕೆಲಸವು ಚಕ್ರವರ್ತಿ ಸೂಲಿಬೆಲೆ ಇವರಿಂದ ನಡೆಯುತ್ತಿದೆ. ಚಕ್ರವರ್ತಿ ಸೂಲಿಬೆಲೆ ಒಬ್ಬ ಬಾಡಿಗೆ ಮನುಷ್ಯ. ಹಣ ಕೊಟ್ಟರೆ ಯಾವ ಕೆಲಸಕ್ಕೂ ಸಿದ್ಧರಿದ್ದಾರೆ. ಇವರನ್ನು ನಂಬಿದರೆ ದಕ್ಷಿಣ ಕನ್ನಡ ಜಿಲ್ಲೆ ಅವ್ಯವಸ್ಥೆ ಸ್ಥಿತಿಗೆ ತಲುಪುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಿಥುನ್ ರೈ ನಝೀರ್ ಬಜಾಲ್, ಮನಪಾ ಸದಸ್ಯೆ ಅಪ್ಪಿ, ರಮಾನಂದ್ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply