Header Ads
Header Ads
Breaking News

ನಳಿನ್ ಕುಮಾರ್ ಕಟೀಲ್‌ರಿಗೆ ವಿವಿಧ ಮುಸ್ಲಿಂ ಸಂಘಟನೆಗಳಿಂದ ಸನ್ಮಾನ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್‌ರಿಗೆ ಮಂಗಳೂರಿನ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಸನ್ಮಾನ ಮಾಡಲಾಯ್ತು. ಮಂಗಳೂರಿನ ಹೊಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಂಗಳೂರಿನ ವಿವಿಧ ಮುಸ್ಲಿಂ ಉದ್ಯಮಿಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರ ನೇತೃತ್ವದಲ್ಲಿ ನಳಿನ್ ಕುಮಾರ್‌ರಿಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ವಿವಿಧ ಮುಸ್ಲಿಂ ಗಣ್ಯರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರ ಬಗ್ಗೆ ಗುಣಗಾನ ಮಾಡಿದ್ರು. ಇದೇ ವೇಳೆ ಮಾತನಾಡಿದ ನಳಿನ್ ಕುಮಾರ್, ಪ್ರೀತಿ, ವಿಶ್ವಾಸದಿಂದ ಮಂಗಳೂರಿನ ಮುಸ್ಲಿಮರು ನನ್ನನ್ನು ಸನ್ಮಾನಿಸಿದ್ದಾರೆ. ಬಹಳಷ್ಟು ಮುಸ್ಲಿಮರಿಗೆ ನನ್ನ ಮೇಲೆ ಕೋಪ ಇದೆ. ಇವತ್ತು ಮಂಗಳೂರಲ್ಲಿ ಮುಸ್ಲಿಮರೇ ನನ್ನನ್ನು ಸನ್ಮಾನಿಸಿದ ವಿಷ್ಯ ಕೇಳಿ ಕೆಲವರಿಗೆ ನಿದ್ದೆ ಬರಲಿಕ್ಕಿಲ್ಲ. ಯಾಕೆಂದರೆ ಅವ್ರಿಗೆ ನನ್ನ ಬಗ್ಗೆ ಗೊತ್ತಿಲ್ಲ. ಸರ್ವಧರ್ಮೀಯರೇ ನನ್ನನ್ನು ಗೆಲ್ಲಿಸಿರುವುದಕ್ಕೆ ಇಂದಿನ ಸನ್ಮಾನವೇ ಉದಾಹರಣೆ ಅಂತಾ ಹೇಳಿದ್ರು.

Related posts

Leave a Reply

Your email address will not be published. Required fields are marked *