Header Ads
Breaking News

ನಳಿನ್ ಕುಮಾರ್ ಕಟೀಲ್ ಬಂಟ ಸಂಘದ ಅಧ್ಯಕ್ಷರ ಹೆಸರನ್ನು ಪೋರ್ಜರಿ ಮಾಡಿದ್ದಾರೆ: ಹರೀಶ್ ಕುಮಾರ್ ಹೇಳಿಕೆ

ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಂಟ ಸಂಘದ ಅಧ್ಯಕ್ಷರ ಹೆಸರನ್ನು ಪೋರ್ಜರಿ ಮಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಸಂಘದ ಅಧ್ಯಕ್ಷರು ದೂರು ನೀಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್‌ನ ಪಾತ್ರವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಅವರು ಕಾಂಗ್ರೆಸ್‌ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜನಾರ್ದನ ಪೂಜಾರಿಯವರ ಬಗ್ಗೆ ಮಾತನಾಡುವವರು ಆಡ್ವಾಣಿ ಬಗ್ಗೆ ಮಾತಾಡಯವುದಿಲ್ಲ. ಕಾಂಗ್ರಸ್ ಮಾಧ್ಯಮವನ್ನು ದುರುಪಯೋಗ ಪಡಿಸಿದ್ದಾರೆ ಎನ್ನುವುದು ಸರಿಯಲ್ಲ. ಬಿಜೆಪಿಗೆ ವಿರುದ್ಧವಾಗಿ ನ್ಯೂಸ್ ಬಂದ ಮಾತ್ರಕ್ಕೆ ಕಾಂಗ್ರೆಸ್‌ನ್ನು ದೂರುವುದು ಸರಿಯಲ್ಲ. ಬಿಜೆಪಿಗರು ಬಿಲ್ಲವ ಸಮುದಾಯದ ಬಗ್ಗೆ ಭಾರಿ ಮಾತಾಡ್ತಾರೆ. ಜೈಲಿನಲ್ಲಿ ಶೇಕಡಾ ೮೦ರಷ್ಟು ಬಿಲ್ಲವ ಯುವಕರಿದ್ದಾರೆ. ಆದರೆ ಕಾಂಗ್ರೆಸ್ ಬಿಲ್ಲವರನ್ನು ಪಾರ್ಲಿಮೆಂಟ್‌ಗೆ ಕಳಿಸಿದೆ ಎಂದು ಹೇಳಿದರು. ಇನ್ನು ವಿಜಯಾ ಬ್ಯಾಂಕ್ ಇತಿಹಾಸದ ಪುಟ ಸೇರುತ್ತಿದೆ. ಏಪ್ರಿಲ್ 1ರಂದು ಕರಾಳ ದಿನ ಆಚರಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದರೆ ವಿಜಯಾ ಬ್ಯಾಂಕ್ ಹೆಸರು ಉಳಿಸುತ್ತೇವೆ ಎಂದು ಹೇಳಿದರು.

ಬೆಳ್ತಂಗಡಿ ಬಿಜೆಪಿ ನಾಯಕ ರಂಜನ್ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧೊಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ನೀತಿ, ಸಿದ್ದಾಂತ ಒಪ್ಪಿಕೊಂಡು ಬಂದರೆ ಸ್ವಾಗತ. ಹಲವು ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಮುಖಂಡರು ಹಾಜರಿದ್ದರು.

Related posts

Leave a Reply

Your email address will not be published. Required fields are marked *