Header Ads
Header Ads
Breaking News

ನಳಿನ್ ಕುಮಾರ್ ಕಟೀಲ್ ರಾಜ್ಯದ ನಿಷ್ಕ್ರೀಯ ನಂಬರ್ ವನ್ ಸಂಸದ:ಹರೀಶ್ ಕುಮಾರ್ ವಾಗ್ದಾಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಸಂಸದ ಆಗಿರುವ ನಳಿನ್ ಕುಮಾರ್ ಕಟೀಲ್‌ಅವರು ರಾಜ್ಯದ ನಂಬರ್‌ವನ್ ನಿಷ್ಕ್ರೀಯ ಸಂಸದ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕೆಲಸ ಇಲ್ಲಿಯವರೆಗೆ ಮಾಡಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಈ ಹಿಂದೆ ಹಲವು ಸಂಸದರು ಚುನಾವಣೆಯಲ್ಲಿ ಗೆದ್ದು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಜಿಲ್ಲೆ ಯಾವುದೇ ಪ್ರಗತಿ ಸಾಧಿಸಿಲ್ಲ. ನಳಿನ್ ಕುಮಾರ್ ಕಟೀಲ್ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬಿಜೆಪಿ ಪಕ್ಷದಲ್ಲೇ ಅವರಿಗೆ ಅಸಮಾಧಾನ ಇದೆ. ರಾಜ್ಯದಲ್ಲಿಯೇ ಅತ್ಯಂತ ನಿಷ್ಕೃಯ ಸಂಸದ ಕಟೀಲ್ ಎಂದು ಹೇಳಿದ ಅವರು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರಕಾರ ಜನವಿರೋಧಿ ಸರಕಾರ. 5 ವರ್ಷದಲ್ಲಿ ಜನರಿಗೆ ಯಾವುದೇ ನೆಮ್ಮದಿ ನೀಡಿಲ್ಲ.ಜನಾರ್ಧನ ಪೂಜಾರಿಯವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹದ ಬಗ್ಗೆ ಉತ್ತರಿಸಿದ ಅವರು ಪೂಜಾರಿಯವರು ರಾಷ್ಟ್ರ ನಾಯಕರು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಮಗೆ ಅಧಿಕಾರ ಇಲ್ಲ. ಜೆಡಿಎಸ್‌ನ ಸಲಹೆ ಅದು ಅವರ ಪಕ್ಷಕ್ಕೆ ಮಾತ್ರ. ನಮ್ಮ ಪಕ್ಷದಲ್ಲಿಶಿಸ್ತು ಕ್ರಮದ ಪ್ರಶ್ನೆ ಬಂದಾಗ ಪಕ್ಷದ ಒಳಗೆ ತೀಮಾಣ ಆಗುತ್ತದೆ. ಬೇರೆ ಪಕ್ಷದ ಅಗತ್ಯ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯಾರಾಂ, ಮುಖಂಡರಾದ ಡಾ. ರಘು, ಲೋಕೇಶ್ವರಿ ವಿನಯಚಂದ್ರ, ದಿವ್ಯಪ್ರಭಾ ಚಿಲ್ತಡ್ಕ, ರಾಜೀವಿ ಆರ್ ರೈ, ಗೀತಾ ಕೋಲ್ಚಾರ್, ರಾಜಾರಾಮ್ ಭಟ್, ಎಸ್. ಸಂಶುದ್ದೀನ್, ಕೆ.ಎಂ.ಮುಸ್ತಫ, ಮಹಮ್ಮದ್ ಕುಂಞಿ ಗೂನಡ್ಕ, ಜಿ,ಕೆ,ಹಮೀದ್, ಪಿ.ಎಸ್.ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *