Header Ads
Header Ads
Breaking News

ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರೈಲ್ವೇ ಅಧಿಕಾರಿಗಳ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಬಾಂಗಣದಲ್ಲಿ ಪಾಲ್ಘಾಟ್, ಮೈಸೂರು ಮತ್ತು ಕೊಂಕಣ್ ರೈಲ್ವೇಸ್‌ಗೆ ಸಂಬಂಧಿಸಿದಂತೆ ಸಮಸ್ಯೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮುಖ್ಯವಾಗಿ ರೈಲ್ವೇ ಜಂಕ್ಷನಲ್ಲಿ ಒನ್‌ಲೈನ್ ಟ್ಯಾಕ್ಸಿಗಳ ಹಾವಳಿಯಿಂದ ಪ್ರೈವೆಟ್ ಟ್ಯಾಕ್ಸಿಗಳಿಗೆ ಅಪಾರ ನಷ್ಠವಾಗಿದೆ, ಮಹಾನಗರ ಪಾಲಿಕೆ ಪಡೀಲ್ ವೃತ್ತದಿಂದ ರೈಲ್ವೇ ಸೇತುವೆಯವರೆಗೆ ಸಮರ್ಪಕ ಒಳಚರಂಡಿ ವ್ಯವಸ್ಥಯಾಗಬೇಕು, ಜೋಕಟ್ಟೆ ರೈಲು ನಿಲ್ದಾಣಕ್ಕೆ ’ಪೇಜಾವರ ರೈಲು ನಿಲ್ದಾಣ’ವೆಂದು ನಾಮಕರಣವಾಗಬೇಕು, ಜೆಪ್ಪು ಮಹಾಕಾಳಿ ಪಡ್ಪು ಅಂಡರ್ ಪಾಸ್ ಕಾಮಗಾರಿ ಶೀಘ್ರದಲ್ಲಿ ಆರಂಭಿಸಬೇಕು, ಮತ್ತು ಮರವೂರು ರೈಲ್ವೇಹಳಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎನ್ನುವ ಎಲ್ಲಾ ವಿಚಾರಗಳನ್ನು ರೈಲ್ವೇ ಅಧಿಕಾರಿಗಳ ಹಾಗೂ ರೈಲ್ವೇ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಚರ್ಚಿಸಲಾಯಿತು.

ಈ ಸಂದರ್ಭ ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಕೊಂಕಣ್ ರೈಲ್ವೇಸ್ ಅಧಿಕಾರಿ ಪಿ.ಎಸ್.ಶಮ್ಮಿ, ಪುತ್ತೂರು ಶಾಸಕ ಸಂಜೀವ ಮಂಠಂದೂರು ಮತ್ತಿತರರು ಉಪಸ್ಥಿರಿದ್ದರು.

Related posts

Leave a Reply